×
Ad

ಅಫ್ಘಾನಿಸ್ತಾನ- ಪಾಕಿಸ್ತಾನ ಯುದ್ಧದಲ್ಲಿ ಅಮೆರಿಕ ಮಧ್ಯಪ್ರವೇಶ : ಟ್ರಂಪ್ ಹೇಳಿದ್ದೇನು?

Update: 2026-02-28 07:20 IST

PC: screengrab/x.com/ANI

ವಾಷಿಂಗ್ಟನ್: ವಿಶ್ವಮಟ್ಟದಲ್ಲಿ ಹಲವು ಸಂಘರ್ಷಗಳನ್ನು ಶಮನಗೊಳಿಸಿದ್ದಾಗಿ ಹೇಳಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಅಫ್ಘಾನಿಸ್ತಾನ- ಪಾಕಿಸ್ತಾನ ಯುದ್ಧದ ವಿಚಾರದಲ್ಲಿ ಅಮೆರಿಕ ಮಧ್ಯ ಪ್ರವೇಶಿಸುವ ಬಗ್ಗೆ ಮಾಧ್ಯಮಗಳು ಗಮನ ಸೆಳೆದಾಗ, "ಇಸ್ಲಾಮಾಬಾದ್ ಅತ್ಯುತ್ತಮವಾಗಿ ನಿಭಾಯಿಸುತ್ತಿದೆ" ಎಂದು ಪ್ರತಿಕ್ರಿಯಿಸಿದ್ದಾರೆ.

ಶುಕ್ರವಾರ ನಡೆದ ವಾಯುದಾಳಿಯಲ್ಲಿ 270 ತಾಲಿಬಾನ್ ಹೋರಾಟಗಾರರನ್ನು ಹತ್ಯೆ ಮಾಡಿ 400ಕ್ಕೂ ಹೆಚ್ಚು ಮಂದಿಯನ್ನು ಗಾಯಗೊಳಿಸಿದ ಬಳಿಕ ಅಫ್ಘಾನಿಸ್ತಾನದ ವಿರುದ್ಧ ಬಹಿರಂಗ ಕದನವನ್ನು ಪಾಕಿಸ್ತಾನ ಘೋಷಿಸಿದೆ.

ಏತನ್ಮಧ್ಯೆ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದ ವಕ್ತಾರ ಝಬೀಹುಲ್ಲಾ ಮುಜಾಹಿದ್ ಹೇಳಿಕೆ ನೀಡಿ, ಅಫ್ಘಾನ್ ಪಡೆಗಳು 55 ಪಾಕಿಸ್ತಾನಿ ಸೈನಿಕರ ಹತ್ಯೆ ಮಾಡಿದ್ದಾಗಿ ವಿವರಿಸಿದ್ದಾರೆ.

ಈ ಸಂಘರ್ಷದ ಬಗ್ಗೆ ಟ್ರಂಪ್ ಅವರ ಗಮನ ಸೆಳೆದಾಗ, ಪಾಕಿಸ್ತಾನವನ್ನು ಬೆಂಬಲಿಸುವ ಸುಳಿವು ನೀಡಿದ ಟ್ರಂಪ್, ಇಸ್ಲಾಮಾಬಾದ್ ಉತ್ತಮವಾಗಿ ನಿಭಾಯಿಸುತ್ತಿದೆ ಎಂದು ಹೇಳಿದರು.

"ನಾನು ಮಧ್ಯಪ್ರವೇಶಿಸಬಹುದು. ಆದರೆ ನಿಮಗೆಲ್ಲ ತಿಳಿದಿರುವಂತೆ ನಾನು ಪಾಕಿಸ್ತಾನದ ಜತೆಗೆ ಇರುತ್ತೇನೆ. ಅಲ್ಲಿ ಒಳ್ಳೆಯ ಪ್ರಧಾನಿ ಹಾಗೂ ಜನರಲ್ ಇದ್ದಾರೆ. ಉತ್ತಮ ನಾಯಕರಿದ್ದಾರೆ. ನಾನು ಅಪಾರವಾಗಿ ಗೌರವಿಸುವ ಇಬ್ಬರು ಇದ್ದಾರೆ" ಎಂದು ಸುದ್ದಿಗಾರರಿಗೆ ತಿಳಿಸಿದರು. ಪಾಕಿಸ್ತಾನವನ್ನು ಬೆಂಬಲಿಸುವ ಸುಳಿವು ನೀಡಿದ ಅವರು, ಅಫ್ಘಾನಿಸ್ತಾನದ ಜತೆಗಿನ ಗಡಿ ಸಂಘರ್ಷದಲ್ಲಿ ಪಾಕಿಸ್ತಾನ ಅದ್ಭುತವಾಗಿ ನಿಭಾಯಿಸುತ್ತಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News