ಅಮೆರಿಕ: ಸಾಮೂಹಿಕ ಗುಂಡಿನ ದಾಳಿ ನಡೆಸಿದ ಆರೋಪಿಯ ಮೃತದೇಹ ಪತ್ತೆ
Image credit: X/@leslibless, @EndWokeness
ವಾಷಿಂಗ್ಟನ್: ಅಮೆರಿಕದ ಮೈನೆ ರಾಜ್ಯದಲ್ಲಿ ಗುಂಡಿನ ದಾಳಿ ನಡೆಸಿ 18 ಜನರನ್ನು ಹತ್ಯೆಗೈದ ಶಂಕಿತ ಆರೋಪಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ರಾಜ್ಯದ ಗವರ್ನರ್ ಶುಕ್ರವಾರ ಹೇಳಿದ್ದಾರೆ.
40 ವರ್ಷ ವಯಸ್ಸಿನ ರಾಬರ್ಟ್ ಕಾರ್ಡ್ ಸ್ವಯಂ ಗುಂಡೇಟಿನಿಂದ ಸಾವನ್ನಪ್ಪಿದ್ದಾನೆ, ಆತನ ಮೃತದೇಹವು ಸಂಜೆ 7:45 ಕ್ಕೆ (2345 GMT) ಪತ್ತೆಯಾಗಿದೆ ಎಂದು ಮೈನೆ ಸಾರ್ವಜನಿಕ ಸುರಕ್ಷತಾ ಆಯುಕ್ತ ಮೈಕ್ ಸೌಶುಕ್ ತಿಳಿಸಿದ್ದಾರೆ.
ಲೆವಿಸ್ಟನ್‌ನಲ್ಲಿನ ಬೌಲಿಂಗ್ ಅಲ್ಲೆ ಮತ್ತು ಬಾರ್-ರೆಸ್ಟೋರೆಂಟ್‌ನಲ್ಲಿ ಬುಧವಾರ ಸಂಜೆ ನಡೆಸಿದ ಸಾಮೂಹಿಕ ಗುಂಡಿನ ದಾಳಿಯಲ್ಲಿ 18 ಜನರು ಸಾವನ್ನಪ್ಪಿದ್ದು, 13 ಮಂದಿ ಗಾಯಗೊಂಡಿದ್ದರು. ಶಂಕಿತ ಆರೋಪಿ ಬಳಿಕ ತಲೆ ಮರೆಸಿಕೊಂಡಿದ್ದು, ಸಮೀಪದ ಪ್ರದೇಶದ ಜನರಲ್ಲಿ ಆತಂಕವನ್ನು ಸೃಷ್ಟಿಸಿತ್ತು.
ಬೌಲಿಂಗ್ ಅಲ್ಲೆ ಮತ್ತು ಬಾರ್-ರೆಸ್ಟೋರೆಂಟ್‌ನಲ್ಲಿ ನಡೆದ ಸಾಮೂಹಿಕ ಹತ್ಯೆ ಈ ವರ್ಷ ಅಮೆರಿಕದಲ್ಲಿ ನಲ್ಲಿ ನಡೆದ ಅತ್ಯಂತ ಭೀಕರ ಸಾಮೂಹಿಕ ಗುಂಡಿನ ದಾಳಿಯಾಗಿದೆ.
ಆರೋಪಿ ಕಾರ್ಡ್‌ನ ದೇಹವು ಆಂಡ್ರೊಸ್ಕೋಗ್ಗಿನ್ ನದಿಯ ಬಳಿ ಲಿಸ್ಬನ್ ಫಾಲ್ಸ್‌ನಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.