×
Ad

ಹೌದಿ ದಾಳಿಯನ್ನು ಹಿಮ್ಮೆಟ್ಟಿಸಿದ ಅಮೆರಿಕ: ವರದಿ

Update: 2023-11-23 21:55 IST

ವಾಷಿಂಗ್ಟನ್: ಯೆಮನ್ನಲ್ಲಿ ಹೌದಿಗಳ ನಿಯಂತ್ರಣದಲ್ಲಿರುವ ಪ್ರದೇಶದಿಂದ ಇಸ್ರೇಲ್ ಪ್ರದೇಶವನ್ನು ಗುರಿಯಾಗಿಸಿ ನಡೆದ ಹಲವು ಡ್ರೋನ್ ದಾಳಿಗಳನ್ನು ಕೆಂಪು ಸಮುದ್ರದಲ್ಲಿ ಗಸ್ತು ತಿರುಗುತ್ತಿರುವ ಅಮೆರಿಕದ ಯುದ್ಧನೌಕೆ ಹಿಮ್ಮೆಟ್ಟಿಸಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಗುರುವಾರ ಹೇಳಿದೆ.

ಕೆಂಪು ಸಮುದ್ರದಲ್ಲಿ ನಿಯೋಜನೆಗೊಂಡಿರುವ ಯುಎಸ್ಎಸ್ ಥಾಮಸ್ ಹಡ್ನರ್ ಯುದ್ಧನೌಕೆ ಹೌದಿಗಳ ಡ್ರೋನ್ ದಾಳಿಯನ್ನು ತುಂಡರಿಸಿದೆ. ಈ ಕಾರ್ಯಾಚರಣೆಯಲ್ಲಿ ಅಮೆರಿಕದ ಯೋಧರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಹೇಳಿಕೆ ತಿಳಿಸಿದೆ.

ಇರಾನ್ನ ಮಿತ್ರರಾಷ್ಟ್ರಗಳನ್ನು ಒಳಗೊಂಡ `ಪ್ರತಿರೋಧ ಗುಂಪಿನ' ಭಾಗವೆಂದು ಘೋಷಿಸಿಕೊಂಡಿರುವ ಹೌದಿಗಳು ಗಾಝಾದಲ್ಲಿ ಯುದ್ಧ ಆರಂಭಗೊಂಡಂದಿನಿಂದ ಇಸ್ರೇಲ್ನತ್ತ ನಿರಂತರ ಡ್ರೋನ್ ದಾಳಿ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News