×
Ad

ಗಾಝಾ ಮೇಲೆ ಇಸ್ರೇಲ್ ದಿಗ್ಬಂಧನ ವಿರುದ್ಧ ವೆನಿಸ್ ಚಿತ್ರೋತ್ಸವದಲ್ಲಿ ಪ್ರತಿಭಟನೆ

Update: 2025-08-31 21:09 IST

PC :  NDTV 

ವೆನಿಸ್,ಆ.31: ಗಾಝಾದ ಮೇಲೆ ಇಸ್ರೇಲ್ ದಿಗ್ಭಂಧನ ವಿಧಿಸಿರುವುದನ್ನು ಖಂಡಿಸಿ ಸಾವಿರಾರು ಜನರು ಶನಿವಾರ ಇಟಲಿಯ ವೆನಿಸ್‌ ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.

ಜಾಗತಿಕ ಸಮುದಾಯದ ಗಮನವು ‘ಸಿನೆಮಾ ಡ್ರಾಮಾಗಳಿಂದ, ವಾಸ್ತವ ಜಗತ್ತಿನ ಯಾತನೆಯತ್ತ ಸರಿಯಬೇಕಾದ ಅಗತ್ಯವಿದೆ’ಯೆಂದು ಪ್ರತಿಭಟನಾಕಾರರರು ಘೋಷಣೆಗಳನ್ನು ಕೂಗಿದರು.

ಈಶಾನ್ಯ ಇಟಲಿಯ ನಗರವಾದ ವೆನಿಸ್‌ ನಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯುತ್ತಿರುವ ಕೆಲವೇ ಕಿಲೋಮೀಟರ್ ದೂರದಲ್ಲಿ ಎಡಪಂಥೀಯ ಪಕ್ಷಗಳು ಈ ಪ್ರತಿಭಟನೆಯನ್ನು ಆಯೋಜಿಸಿದ್ದವು.

ಜಾರ್ಜ್ ಕ್ಲೂನಿ ಹಾಗೂ ಜೂಲಿಯಾ ರಾಬರ್ಟ್ಸ್, ಎಮ್ಮಾ ಸ್ಟೋನ್ ಮತ್ತಿತರ ಖ್ಯಾತ ಹಾಲಿವುಡ್ ತಾರೆಯರು ಚಿತ್ರೋತ್ಸವದಲ್ಲಿ ಭಾಗವಹಿಸಿದ್ದಾರೆ.

ಸುಮಾರು 3-4 ಸಾವಿರದಷ್ಟಿದ್ದ ಪ್ರತಿಭಟನಕಾರರು ಫೆಲೆಸ್ತೀನ್ ಧ್ವಜಗಳನ್ನು ಬೀಸುತ್ತಾ, ಚಲನಚಿತ್ರೋತ್ಸವ ನಡೆಯುತ್ತಿರುವ ಸ್ಥಳದ ಪ್ರವೇಶದ್ವಾರದವರೆಗೆ ಪಾದಯಾತ್ರೆ ನಡೆಸಿದರು.

ನರಮೇಧಕ್ಕೆ ನೀವೆಲ್ಲರೂ ಪ್ರೇಕ್ಷಕರಾಗಿದ್ದೀರಿ ಎಂಬಿತ್ಯಾದಿ ಘೋಷಣೆಗಳ ಫಲಕಗಳನ್ನು ಅವರು ಹಿಡಿದಿದ್ದರು. ಜಗತ್ತಿನ ಅತ್ಯಂತ ಪುರಾತನ ಅಂತಾರಾಷ್ಟ್ರೀಯ ಚಿತ್ರೋತ್ಸವವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವೆನಿಸ್ ಚಿತ್ರೋತ್ಸವವನ್ನು ಗಾಝಾದಲ್ಲಿನ ಮಾನವೀಯ ಬಿಕ್ಕಟ್ಟಿನ ಬಗ್ಗೆ ಜಾಗತಿಕವಾಗಿ ಗಮನಸೆಳೆಯಲು ಬಳಸಬೇಎಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News