×
Ad

ಇರಾನ್ ಬೆಂಬಲಿತ ಹೌದಿಗಳು ಎನ್ನುವಿರಾದರೆ ಅಮೆರಿಕ ಬೆಂಬಲಿತ ಐಡಿಎಫ್ ಎಂದು ಯಾಕಾಗಬಾರದು?: ಬಿಬಿಸಿಗೆ ಝೊಹ್ರಾನ್ ಮಮ್ದಾನಿ ಪ್ರಶ್ನೆ

Update: 2025-07-20 21:38 IST

Photo : x/ZohranKMamdani

ನ್ಯೂಯಾರ್ಕ್, ಜು.20: ಹೌದಿ ಹಾಗೂ ಹಮಾಸ್ ಗುಂಪುಗಳನ್ನು ಯಾವಾಗಲೂ ಇರಾನ್ ಬೆಂಬಲಿತ ಗುಂಪು ಎಂದು ಉಲ್ಲೇಖಿಸುವ ಬಿಬಿಸಿ(ಬ್ರಿಟಿಷ್ ಬ್ರಾಡ್ಕಾಸ್ಟಿಂಗ್ ಕಾರ್ಪೋರೇಷನ್) ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಯಾವತ್ತೂ `ದೋಷಾರೋಪಣೆಗೊಳಗಾದ ಯುದ್ಧಾಪರಾಧಿ' ಅಥವಾ ಇಸ್ರೇಲಿ ಮಿಲಿಟರಿಯನ್ನು ಅಮೆರಿಕ ಬೆಂಬಲಿತ ಎಂದು ಯಾಕೆ ಉಲ್ಲೇಖಿಸುವುದಿಲ್ಲ ಎಂದು ನ್ಯೂಯಾರ್ಕ್ ನಗರದ ಮೇಯರ್ ಅಭ್ಯರ್ಥಿ ಝೊಹ್ರಾನ್ ಮಮ್ದಾನಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬಿಬಿಸಿ ಯಾವಾಗಲೂ ಇರಾನ್ ಬೆಂಬಲಿತ ಹೌದಿಗಳು ಅಥವಾ ಹಮಾಸ್ ನಿರ್ವಹಿಸುವ ಆಸ್ಪತ್ರೆ ಎಂದು ಉಲ್ಲೇಖಿಸುತ್ತಾ ಬಂದಿದೆ. ಆದರೆ ನೆತನ್ಯಾಹು ಅಥವಾ ಇಸ್ರೇಲ್ ರಕ್ಷಣಾ ಪಡೆ(ಐಡಿಎಫ್) ಬಗ್ಗೆ ಈ ರೀತಿ ಉಲ್ಲೇಖಿಸುವುದಿಲ್ಲ ಎಂದು ಮಮ್ದಾನಿ ಟೀಕಿಸಿದ್ದಾರೆ.

ನೆತನ್ಯಾಹು ವಿರುದ್ಧ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್(ಐಸಿಸಿ) ಬಂಧನ ವಾರಾಂಟ್ ಜಾರಿಗೊಳಿಸಿರುವುದನ್ನು ಉಲ್ಲೇಖಿಸಿರುವ ಮಮ್ದಾನಿ `ಒಂದು ವೇಳೆ ನ್ಯೂಯಾರ್ಕ್ನ ಮೇಯರ್ ಆಗಿ ಆಯ್ಕೆಗೊಂಡರೆ, ನೆತನ್ಯಾಹು ನ್ಯೂಯಾರ್ಕ್‌ ಗೆ ಭೇಟಿ ನೀಡಿದರೆ ಅವರನ್ನು ಅಂತರಾಷ್ಟ್ರೀಯ ಕಾನೂನಿನಡಿ ಬಂಧಿಸುತ್ತೇನೆ' ಎಂದು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News