×
Ad

ದಕ್ಷಿಣ ಸಾಗರದತ್ತ ಚಲಿಸುತ್ತಿರುವ ವಿಶ್ವದ ಬೃಹತ್ ಮಂಜುಗಡ್ಡೆ : ವರದಿ

Update: 2023-11-25 22:50 IST

Photo: Canva

ಸಿಡ್ನಿ: ವಿಶ್ವದ ಅತೀ ದೊಡ್ಡ ಮಂಜುಗಡ್ಡೆಯು 30 ವರ್ಷಗಳ ಬಳಿಕ ಚಲನೆ ಆರಂಭಿಸಿದ್ದು ದಕ್ಷಿಣ ಸಾಗರದತ್ತ ಮುಂದುವರಿಯುತ್ತಿದೆ ಎಂದು ವಿಜ್ಞಾನಿಗಳು ಶುಕ್ರವಾರ ಮಾಹಿತಿ ನೀಡಿದ್ದಾರೆ.

ಸುಮಾರು 4 ಸಾವಿರ ಚದರ ಕಿ.ಮೀ. ವ್ಯಾಪ್ತಿಯ ಈ ಮಂಜುಗಡ್ಡೆ ಗಾತ್ರದಲ್ಲಿ ನ್ಯೂಯಾರ್ಕ್ ನಗರಕ್ಕಿಂತ 3 ಪಟ್ಟು ದೊಡ್ಡದಿದೆ. 1986ರಲ್ಲಿ ಪಶ್ಚಿಮ ಅಂಟಾಕ್ರ್ಟಿಕಾದ ಫಿಲ್ಚ್ನರ್- ರೋನೆ ಮಂಜುಗಡ್ಡೆ ಕಪಾಟು(ಮಂಜುಗಡ್ಡೆಯ ದೊಡ್ಡ ತೇಲುವ ವೇದಿಕೆ)ಯಿಂದ ಪ್ರತ್ಯೇಕಗೊಂಡಿದ್ದ ಎ23ಎ ಎಂದು ಹೆಸರಿಸಲಾದ ಬೃಹತ್ ಅಂಟಾಕ್ರ್ಟಿಕ್ ಮಂಜುಗಡ್ಡೆ 3 ದಶಕಗಳಷ್ಟು ಕಾಲದ ಸಾಪೇಕ್ಷ ನಿಶ್ಚಲತೆಯ ಸ್ಥಿತಿಯನ್ನು ಮುರಿದು ಚಲನೆಯನ್ನು ಆರಂಭಿಸಿದೆ. ಈ ಹಿಂದೊಮ್ಮೆ ಸೋವಿಯತ್ ಒಕ್ಕೂಟದ ಸಂಶೋಧನಾ ನೆಲೆಯಾಗಿದ್ದ ಎ23ಎ ಮಂಜುಗಡ್ಡೆ ವೆಡ್ಡೆಲ್ ಸಮುದ್ರ(ದಕ್ಷಿಣ ಸಾಗರದ ಭಾಗ)ದಲ್ಲಿ ಸ್ಥಿರವಾಗಿತ್ತು.

ಆದರೆ ಇತ್ತೀಚಿನ ಉಪಗ್ರಹ ಚಿತ್ರಗಳು ಅದರ ಸ್ಥಿತಿಯಲ್ಲಿ ನಾಟಕೀಯ ಬದಲಾವಣೆಯನ್ನು ಸೂಚಿಸಿದೆ. 30 ವರ್ಷಗಳಲ್ಲೇ ಮೊದಲ ಬಾರಿಗೆ ಎ23ಎ ಚಲಿಸುತ್ತಿದೆ. ಬಲವಾದ ಗಾಳಿ ಮತ್ತು ಸಾಗರ ಪ್ರವಾಹಗಳು ಅಂಟಾಕ್ರ್ಟಿಕ್ ದ್ವೀಪಕಲ್ಪದ ಉತ್ತರ ತುದಿಯಿಂದ ಅದನ್ನು ಮುಂದೂಡುತ್ತಿದೆ. ಈ ಪ್ರದೇಶದಲ್ಲಿ ಅಂತಹ ಬೃಹತ್ ಮಂಜುಗಡ್ಡೆಯ ಚಲನೆಯು ಸುತ್ತಮುತ್ತಲಿನ ಪರಿಸರದ ಮೇಲೆ ಸಂಭಾವ್ಯ ಪರಿಣಾಮಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News