×
Ad

ಯೆಮನ್ | ವಿಶ್ವಸಂಸ್ಥೆಯ 20 ಸಿಬ್ಬಂದಿಗಳನ್ನು ವಶಕ್ಕೆ ಪಡೆದ ಹೌದಿ ಬಂಡುಕೋರರು : ವರದಿ

Update: 2025-10-19 22:55 IST

ಸಾಂದರ್ಭಿಕ ಚಿತ್ರ

ಸನಾ, ಅ.19: ಯೆಮನ್ ರಾಜಧಾನಿ ಸನಾದಲ್ಲಿ ರವಿವಾರ ವಿಶ್ವಸಂಸ್ಥೆಯ ಸೌಲಭ್ಯದ ಮೇಲೆ ದಾಳಿ ನಡೆಸಿದ ಇರಾನ್ ಬೆಂಬಲಿತ ಹೌದಿ ಸಶಸ್ತ್ರ ಹೋರಾಟಗಾರರು 20 ಸಿಬ್ಬಂದಿಗಳನ್ನು ವಶಕ್ಕೆ ಪಡೆದಿರುವುದಾಗಿ ವಿಶ್ವಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.

ಯೆಮನ್ ರಾಜಧಾನಿ ಸನಾದ ನೈಋತ್ಯದಲ್ಲಿರುವ ಹಡಾ ನಗರದಲ್ಲಿರುವ ವಿಶ್ವಸಂಸ್ಥೆಯ ಕಚೇರಿಯೊಳಗೆ ನುಗ್ಗಿದ ಹೌದಿಗಳು 20 ಸಿಬ್ಬಂದಿಗಳನ್ನು ವಶಕ್ಕೆ ಪಡೆದ ಬಳಿಕ ಕಚೇರಿಯಲ್ಲಿದ್ದ ಫೋನ್‍ಗಳು, ಕಂಪ್ಯೂಟರ್‌ಗಳು, ಸರ್ವರ್‌ಗಳ ಸಹಿತ ಎಲ್ಲಾ ಸಂವಹನ ಸಾಧನಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ `ದಿ ಅಸೋಸಿಯೇಟೆಡ್ ಪ್ರೆಸ್' ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News