×
Ad

ಯೂನುಸ್ ಪಾಕಿಸ್ತಾನಿ: ವಿಶ್ವಸಂಸ್ಥೆಯಲ್ಲಿ ಹಸೀನಾ ಬೆಂಬಲಿಗರಿಂದ ಪ್ರತಿಭಟನೆ

Update: 2025-09-27 08:50 IST

ನ್ಯೂಯಾರ್ಕ್: ಬಾಂಗ್ಲಾದೇಶದ ಮಧ್ಯಂತರ ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್‌ ಅವರು ಶುಕ್ರವಾರ ವಿಶ್ವಸಂಸ್ಥೆಯ 80ನೇ ಮಹಾ ಅಧಿವೇಶನದಲ್ಲಿ ಭಾಷಣ ಮಾಡುತ್ತಿದ್ದಂತೆಯೇ ಸಭಾಂಗಣದ ಹೊರಗೆ ಮಾಜಿ ಪ್ರಧಾನಿ ಹಸೀನಾ ಬೆಂಬಲಿಗರು ಪ್ರತಿಭಟನೆ ನಡೆಸಿದರು. "ಯೂನುಸ್ ಪಾಕಿಸ್ತಾನಿ, ಅವರು ಪಾಕಿಸ್ತಾನಕ್ಕೆ ಮರಳಲಿ" ಎಂದು ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಯೂನುಸ್ ಆಡಳಿತ ಪಕ್ಷಪಾತದಿಂದ ಕೂಡಿದೆ ಹಾಗೂ ಕಳಪೆಯಾಗಿದೆ ಎಂದು ಆಪಾದಿಸಿದರು.

ವಿದ್ಯಾರ್ಥಿ ಪ್ರತಿಭಟನೆಯ ಕಾರಣದಿಂದ ಬಾಂಗ್ಲಾದಲ್ಲಿ 15 ವರ್ಷಗಳ ಹಸೀನಾ ಆಡಳಿತ ಕೊನೆಗೊಂಡ ಬೆನ್ನಲ್ಲೇ ಯೂನುಸ್ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅಧಿಕಾರಕ್ಕೆ ಬಂದ ಬಳಿಕ ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಎರಡನೇ ಭಾಷಣ ಮಾಡಿದರು. ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಹಸೀನಾ ಬೆಂಬಲಿಗರು ಮಧ್ಯಂತರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಯೂನುಸ್ ಸರ್ಕಾರ ಅಲ್ಪಸಂಖ್ಯಾತರ ಮೇಲೆ ಅದರಲ್ಲೂ ಮುಖ್ಯವಾಗಿ ಹಿಂದೂಗಳ ಮೇಲೆ ದಾಳಿಗೆ ಅವಕಾಶ ಮಾಡಿಕೊಟ್ಟಿದೆ ಎಂದು ಆಪಾದಿಸಿದರು. 

ಹಸೀನಾಗೆ ಆಶ್ರಯ ನೀಡಿದ್ದಕ್ಕಾಗಿ ಭಾರತದ ಮೇಲೆ ಅಸಮಾಧಾನ ಹೊಂದಿರುವ ಯೂನುಸ್ ನಿನ್ನೆಯಷ್ಟೇ, ಉಭಯ ದೇಶಗಳ ಸಂಬಂಧ ಹದಗೆಡಲು ಇದು ಕಾರಣ ಎಂದು ಹೇಳಿದ್ದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News