ಟ್ರಂಪ್, ಪುಟಿನ್ ಅವರೊಂದಿಗೆ ತ್ರಿಪಕ್ಷೀಯ ಸಭೆಗೆ ಝೆಲೆನ್‍ಸ್ಕಿ ಪ್ರಸ್ತಾಪ
Update: 2025-05-28 22:08 IST
ವೊಲೊದಿಮಿರ್ ಝೆಲೆನ್‍ಸ್ಕಿ , ಡೊನಾಲ್ಡ್ ಟ್ರಂಪ್ , ವ್ಲಾದಿಮಿರ್ ಪುಟಿನ್ | PC : NDTV
ಕೀವ್: ಸುಮಾರು 3 ವರ್ಷಗಳಿಂದ ಮುಂದುವರಿದಿರುವ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ತ್ರಿಪಕ್ಷೀಯ ಸಭೆ ನಡೆಸುವ ಪ್ರಸ್ತಾಪವನ್ನು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ಮುಂದಿರಿಸಿದ್ದಾರೆ.
ಪುಟಿನ್ ಗೆ ದ್ವಿಪಕ್ಷೀಯ ಸಭೆ ಆರಾಮದಾಯಕ ಆಗಿರದಿದ್ದರೆ ಅಥವಾ ತ್ರಿಪಕ್ಷೀಯ ಸಭೆಯನ್ನು ಎಲ್ಲರೂ ಬಯಸುವುದಾದರೆ ತನಗೇನೂ ಅಭ್ಯಂಥರವಿಲ್ಲ. ಟ್ರಂಪ್-ಪುಟಿನ್ ಹಾಗೂ ತನ್ನ ನಡುವಿನ ಸಭೆ ಸೇರಿದಂತೆ ಯಾವುದೇ ಸ್ವರೂಪಕ್ಕೆ ಸಿದ್ಧವಾಗಿದ್ದೇನೆ' ಎಂದು ಝೆಲೆನ್‍ಸ್ಕಿ ಹೇಳಿರುವುದಾಗಿ ವರದಿಯಾಗಿದೆ.
ಕಳೆದ ಕೆಲ ದಿನಗಳಿಂದ ಉಕ್ರೇನ್ ಮೇಲೆ ಭೀಕರ ವೈಮಾನಿಕ ದಾಳಿ ಮುಂದುವರಿಸಿರುವ ರಶ್ಯದ ಬ್ಯಾಂಕಿಂಗ್ ಮತ್ತು ಇಂಧನ ಕ್ಷೇತ್ರದ ಮೇಲೆ ಅಮೆರಿಕ ಕಠಿಣ ನಿರ್ಬಂಧ ವಿಧಿಸುವುದನ್ನು ನಾವು ಕಾಯುತ್ತಿದ್ದೇವೆ. ಟ್ರಂಪ್ ತಕ್ಷಣ ನಿರ್ಬಂಧ ಜಾರಿಗೊಳಿಸಬೇಕು ಎಂದು ಝೆಲೆನ್‍ಸ್ಕಿ ಒತ್ತಾಯಿಸಿದ್ದಾರೆ.