×
Ad

ಶತಕ ಪೂರೈಸಿದ ಇಸ್ರೋ; 100ನೇ ರಾಕೆಟ್ ಯಶಸ್ವೀ ಉಡಾವಣೆ

Update: 2025-01-29 08:30 IST

PC: x.com/isro

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಬುಧವಾರ (ಜನವರಿ 29, 2025) ಬೆಳಿಗ್ಗೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ತನ್ನ ಐತಿಹಾಸಿಕ 100 ನೇ ಉಡಾವಣೆಯನ್ನು ನಡೆಸಿತು. NVS-02 ಉಪಗ್ರಹದೊಂದಿಗೆ GSLV-F15 ರಾಕೆಟ್ ಬಾಹ್ಯಾಕಾಶ ನಿಲ್ದಾಣದ ಎರಡನೇ ಉಡಾವಣಾ ಪ್ಯಾಡ್‌ನಿಂದ ಬೆಳಿಗ್ಗೆ 6.23 ಕ್ಕೆ ಉಡಾವಣೆಯಾಯಿತು.‌

NVS-02 ಉಪಗ್ರಹವನ್ನು ಇತರ ಉಪಗ್ರಹ ಆಧಾರಿತ ಕಾರ್ಯ ಕೇಂದ್ರಗಳ ಬೆಂಬಲದೊಂದಿಗೆ U. R. ಸ್ಯಾಟಲೈಟ್ ಸೆಂಟರ್ (URSC) ನಲ್ಲಿ ವಿನ್ಯಾಸಗೊಳಿಸಿ ಸಂಯೋಜಿಸಲಾಗಿದೆ.

“2025 ರ ಮೊದಲ ಉಡಾವಣೆಯನ್ನು ಯಶಸ್ವಿಯಾಗಿ ಸಾಧಿಸಲಾಗಿದೆ. ಉಪಗ್ರಹವನ್ನು ಉದ್ದೇಶಿತ ಕಕ್ಷೆಗೆ ಇರಿಸಲಾಗಿದೆ” ಎಂದು ಈ ತಿಂಗಳ ಆರಂಭದಲ್ಲಿ ಬಾಹ್ಯಾಕಾಶ ಸಂಸ್ಥೆಯ ಉಸ್ತುವಾರಿ ವಹಿಸಿಕೊಂಡ ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News