×
Ad

ಕಲಬುರಗಿ | ಕಾರ್ಮಿಕನ ಮೃತದೇಹ ಎಳೆದೊಯ್ದ ಪ್ರಕರಣ: 6 ಮಂದಿಯ ಬಂಧನ

Update: 2025-02-19 17:56 IST

ಕಲಬುರಗಿ: ಸೇಡಂ ತಾಲೂಕಿನ ಕೊಡ್ಲಾ ಗ್ರಾಮದ ಬಳಿಯಿರೋ ಶ್ರೀ ಸಿಮೆಂಟ್ ಕಂಪನಿಯ ಬಿಹಾರ ಮೂಲದ ಚಂದನಸಿಂಗ್ (34) ಕಾರ್ಮಿಕ ಮೃತದೇಹವನ್ನು ಎಳೆದೊಯ್ದು ಅವಮಾನಿಸಿರುವ ಘಟನೆಗೆ ಸಂಬಂಧಿಸಿದಂತೆ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಹೈದರ್ ಅಲಿ, ರವಿಶಂಕರ್, ಹರಿ೦ದರ್ ನಿಶಾದ್, ಅಜಯ್, ರಮೇಶ್ ಚಂದ್ರ, ಅಖಿಲೇಶ್ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.

ಕಂಪನಿಯ ಹೊರಗಡೆ ಪ್ರದೇಶದಲ್ಲಿ ಲೋ ಬಿಪಿಯಾಗಿ ಹೃದಯಾಘಾತದಿಂದ ಮೃತಪಟ್ಟಿರುವ ಕಾರ್ಮಿಕನ ಶವವನ್ನು ಪ್ರಾಣಿಯಂತೆ ಅಮಾನವೀಯವಾಗಿ ಎಳೆದೊಯ್ದು ವಿಕೃತ ಮೆರೆದಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಸೇಡಂ ಠಾಣೆಯ ಪೊಲೀಸರು ಬಿಹಾರದ  6 ಮಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ಕುರಿತು ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಂಪನಿ ಬೆಂಬಲಕ್ಕೆ ನಿಂತಿರುವುದು ಮೆಲ್ನೋಟಕ್ಕೆ ಕಂಡು ಬರುತ್ತಿದ್ದು, ಒಬ್ಬ ಕೂಲಿ ಕಾರ್ಮಿಕ ಮೃತಪಟ್ಪರೆ ಕಂಪನಿ ಆಡಳಿತ ಮಂಡಳಿ ಮೇಲೆ ಪ್ರಕರಣ ದಾಖಲಾಗದೆ ಕೂಲಿ ಕಾರ್ಮಿಕರ ಮೇಲೆ ಪ್ರಕರಣ ದಾಖಲಾಗಿರುತ್ತದೆ. ಆಡಳಿತ ಮಂಡಳಿ ಅವರು ಕಾನೂನು ವಿರುದ್ಧ ನಡೆದುಕೊಳುತ್ತಿದ್ದಾರೆ. ಕಂಪನಿಯ ಧೂಳಿನಿಂದ ಸ್ಥಳೀಯ ಜನರಿಗೆ ಆರೋಗ್ಯದಲ್ಲಿ ದಿನನಿತ್ಯ ಅಸ್ತಮಾ, ಚರ್ಮ ರೋಗ, ದಮ್ಮು, ಹೃದಯಾಘಾತ ಸೇರಿದಂತೆ ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ, ಅಧಿಕಾರಿಗಳು ಇದರು ಇಲ್ಲದಂತಾಗಿದೆ ಎಂದು ಮಳಖೇಡ ಗ್ರಾಪಂ ಸದಸ್ಯ ಉಮೇಶ್ ಪಾಂಡುಸಿಂಗ್ ಚೌವ್ಹಾಣ್ ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News