×
Ad

ಕಲಬುರಗಿ| 76ನೇ ಸಂವಿಧಾನ ಸಮರ್ಪಣಾ ದಿನಾಚರಣೆ: ಸಾಧಕರಿಗೆ ಸನ್ಮಾನ ಕಾರ್ಯಕ್ರಮ

Update: 2025-12-02 20:06 IST

ಕಲಬುರಗಿ: ನಗರದ ಡಾ.ಎಸ್.ಎಂ.ಪoಡಿತ್ ರಂಗ ಮಂದಿರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ, ಅರೆ ಸರ್ಕಾರಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ನೌಕರರ ಸಂಘ, ರಾಜ್ಯ ಘಟಕ, ಜಿಲ್ಲಾ ಘಟಕದಿಂದ 76ನೇ ಸಂವಿಧಾನ ಸಮರ್ಪಣಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ರಮೇಶ್ ಮಾಡ್ಯಾಳಕರ್ ಅವರು, ಸಂವಿಧಾನದ ಬಗ್ಗೆ ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯವಾಗಿದೆ, ಸಂವಿಧಾನ ಓದಬೇಕು ಅದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.  

ಶಿಕ್ಷಣದಿಂದಲೇ ಎಲ್ಲಾ ಸಾಧ್ಯ. ಶಿಕ್ಷಣ, ಸಂಘಟನೆ ಮತ್ತು ಹೋರಾಟದಿಂದ ಅನ್ಯಾಯಗಳನ್ನು ಎದುರಿಸಬೇಕು, ಓದಿ ತಿಳಿದುಕೊಂಡಿದ್ದರೆ ಸಾಕಾಗದು. ನಮ್ಮ ಸಮಾಜವನ್ನು ಪರಿವರ್ತನೆ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಂಘಟನೆಯ ರಾಜ್ಯಾಧ್ಯಕ್ಷ ಮಹೇಶ್ ಮಾತನಾಡಿ, ಪ್ರತಿಯೊಬ್ಬರಲ್ಲಿ ಸಂವಿಧಾನದ ಜಾಗೃತಿಯನ್ನು ಮೂಡಿಸಬೇಕು. ಸಾಧಾರಣ ವ್ಯಕ್ತಿಗೂ ಸಂವಿಧಾನ ಏನು ಎಂಬುದು ಅರ್ಥವಾಗಬೇಕು. ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳಬೇಕು. ಆಗಲೇ ನಮ್ಮ ಸಮಾಜ ಸುಧಾರಣೆಯಾಗಲು ಸಾಧ್ಯವಾಗುತ್ತದೆ ಎಂದರು.

ಈ ವೇಳೆ ಮಲ್ಲಿಕಾರ್ಜುನ್ ಹಲಗೇರಾ, ಡಾ. ಅಂಬಾರಾಯ ರುದ್ರವಾಡಿ, ಡಾ.ಶರಣಬಸಪ್ಪ ಖ್ಯಾತನಾಳ, ಸ್ವಾತಿ ದರ್ಗಿ, ವಿದ್ಯಾಧರ್ ಕಾಂಬಳೆ, ವಿಠ್ಠಲ್ ಗೋಳಾ, ಡಾ. ರುದ್ರವಾಡಿ, ಡಾ. ಶರಣಬಸಪ್ಪ ಖ್ಯಾತನಾಳ, ರವಿಕಾಂತಿ, ದೇವಮ್ಮ ಹುಲಿಮನಿ, ಸಂಜಯ ಕಪೂರ, ಡಾ.ಚಂದ್ರಕಾoತ ನರಿಬೋಳ, ಡಾ.ರಾಕೇಶ್‌ ಕಾಂಬಳೆ, ವಿದ್ಯಾಧರ ಕಾಂಬಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.  

ಈ ವೇಳೆ ಡಾ.ಮಾರುತಿ ಬೇಂದ್ರೆ ನಿರೂಪಿಸಿದರು. ಕಾಶಿನಾಥ್ ಮುಖರ್ಜಿ ಸ್ವಾಗತಿಸಿದರು. ಗಜೇಂದ್ರ ಮಿಂಚಾ ಪ್ರಾರ್ಥಿಸಿದರು. ಸುಭಾಷ ಆರ್. ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News