Kalaburagi | ಆ.10 ರಿಂದ ಡಿ.ಇಎಲ್.ಇಡಿ/ ಡಿ.ಪಿ.ಎಸ್.ಇ. ಮುಖ್ಯ ಪರೀಕ್ಷೆ
Update: 2026-08-06 21:28 IST
ಸಾಂದರ್ಭಿಕ ಚಿತ್ರ (AI)
ಕಲಬುರಗಿ: ಆಗಸ್ಟ್ 2026ರ ಡಿ.ಇಎಲ್.ಇಡಿ/ ಡಿ.ಪಿ.ಎಸ್.ಇ. ಮುಖ್ಯ ಪರೀಕ್ಷೆಯು ಆ.10 ರಿಂದ 21 ರವರೆಗೆ ಈ ಕೆಳಕಂಡ ಕಲಬುರಗಿ ನಗರದ ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿದೆ ಎಂದು ಕಲಬುರಗಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ (ಡಯಟ್) ಪ್ರಾಚಾರ್ಯರು/ ಉಪನಿರ್ದೇಶಕರು (ಅ) ಅವರು ತಿಳಿಸಿದ್ದಾರೆ.
ಪರೀಕ್ಷಾ ಕೇಂದ್ರಗಳ ವಿವರ ಇಂತಿದೆ. ಕಲಬುರಗಿ ನಗರದ ಹಾಗರಗಾ ಕ್ರಾಸ್‍ನ ರಿಂಗ್ ರಸ್ತೆಯ ಡೆಕ್ಕನ್ ಡಿ.ಇಡಿ. ಕಾಲೇಜು ಮತ್ತು ಡೆಕ್ಕನ್ ಡಿ.ಇಡಿ. ಕಾಲೇಜು, ಮಾಲಗತ್ತಿ ರಸ್ತೆಯ ನೌಶಿನ್ ಕಾಲೋನಿಯ ಬೆಂಗಳೂರು ಇಂಟರ್‍ನ್ಯಾಷನಲ್ ಸ್ಕೂಲ್ ಹಾಗೂ ಕಲಬುರಗಿಯ ಕುಸನೂರ ರಸ್ತೆಯ ಸರಸ್ವತಿಪುರ ಶ್ರೀ ಮುರಘರಾಜೇಂದ್ರ ಸ್ವಾಮೀಜಿ ಡಿ.ಇಡಿ. ಕಾಲೇಜಿನಲ್ಲಿ ಮುಖ್ಯ ಪರೀಕ್ಷೆ ಜರುಗಲಿದೆ.