ಕಲಬುರಗಿ | ಇಂದಿರಾ ಕ್ಯಾಂಟೀನ್ ಊಟ ಸವಿದ ಸಚಿವ ಡಾ.ಶರಣಪ್ರಕಾಶ್ ಪಾಟೀಲ್
Update: 2025-06-23 18:17 IST
ಕಲಬುರಗಿ: ಸೇಡಂ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಉದ್ಘಾಟನೆಗೊಂಡ ಇಂದಿರಾ ಕ್ಯಾಂಟೀನ್ ನಲ್ಲಿ ಮಧ್ಯಾಹ್ನದ ಊಟವನ್ನು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ದಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು ಸವಿದರು.
127 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಂಡ ಇಂದಿರಾ ಕ್ಯಾಂಟೀನ್ ಕಟ್ಟಡವನ್ನು ಉದ್ಘಾಟಿಸಿದ ಸಚಿವ ಶರಣಪ್ರಕಾಶ್ ಪಾಟೀಲ್ ಅವರು ನೇರ ಕ್ಯಾಂಟೀನ್ ಅಡುಗೆ ಮನೆಗೆ ತೆರಳಿ, ಕಲೆ ಕಾಲ ಸಿಬ್ಬಂದಿಗಳ ಜೊತೆ ಸಂವಾದ ನಡೆಸಿ, ಅಡುಗೆಯನ್ನು ತಾವೇ ಸ್ವತಃ ಬಕೇಟಿಗೆ ಹಾಕಿದರು. ನಂತರ ಸಾರ್ವಜನಿಕರ ಜೊತೆ ಇಂದಿರಾ ಕ್ಯಾಂಟೀನ್ ಊಟ ಸವಿದರು.