×
Ad

ಕಲಬುರಗಿ | ಸಂಗೀತದಿಂದ ಮನಸ್ಸಿಗೆ ಶಾಂತಿ ನೆಮ್ಮದಿ : ಶಿವಶರಣಯ್ಯ ಸ್ವಾಮಿ

Update: 2025-07-02 18:41 IST

ಕಲಬುರಗಿ: ಇಂದಿನ ಒತ್ತಡದ ಜೀವನದಲ್ಲಿ ಬೆಂದ ಜೀವಕ್ಕೆ ಸಂಗೀತ ಆಲಿಸುವದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಲಭಿಸುತ್ತದೆ ಎಂದು ನಿಂಗದಳ್ಳಿಯ ದಾನಮ್ಮ ದೇವಿ ಗಾನವೃಂದ ಸೇವಾ ಸಂಸ್ಥೆ ಕಾರ್ಯದರ್ಶಿ, ಆಕಾಶವಾಣಿ, ದೂರದರ್ಶನ ಸಂಗೀತ ಕಲಾವಿದ ಶಿವಶರಣಯ್ಯ ಸ್ವಾಮಿ ಹೇಳಿದ್ದಾರೆ.

ಕಲಬುರಗಿಯ ಶೇಖ್‌ರೋಜಾ ಶ್ರೀ ಕಾಳಮ್ಮ ದೇವಿ ದೇವಸ್ಥಾನದಲ್ಲಿ ನಿಂಗದಳ್ಳಿಯ ದಾನಮ್ಮ ದೇವಿ ಗಾನವೃಂದ ಸೇವಾ ಸಂಸ್ಥೆ ಆಶ್ರಯದಲ್ಲಿ ಸಂಗೀತ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಲೆ, ಸಾಹಿತ್ಯ, ಸಂಗೀತ ಇದು ನಿಂತ ನೀರಲ್ಲ ಕವಿ, ಕಲಾವಿದರು ರಚಿಸಿ ಹಾಡುವ ವಚನ ಸಂಗೀತ, ಭಕ್ತಿಗೀತೆ, ಜಾನಪದ ಸಂಗೀತ, ತತ್ವಪದ, ಭಜನಾ ಪದಗಳು, ಸುಗಮ ಸಂಗೀತ, ಭಾವಗೀತೆಗಳು ಆಲಿಸಿದರೆ ಕೇಳುಗರಿಗೆ ಒಂದಿಷ್ಟು ಆನಂದ ತರುತ್ತದೆ. ಸರಕಾರ ಕಲಾವಿದರಿಗೆ ಮಾಶಾಸನಗಳು ನೀಡುವ ಜತೆಗೆ ಸಂಗೀತ ಕಾರ್ಯಕ್ರಮಗಳಿಗೆ ಸದಾ ಪ್ರೋತ್ಸಾಹ ನೀಡಬೇಕು ಎಂದರು.

ಉದ್ಯಮಿ ನಂದಕುಮಾರ ವಿಶ್ವಕರ್ಮ, ಲತಾ ವಿಶ್ವಕರ್ಮ, ಸಂತೋಷ ವಿಶ್ವಕರ್ಮ, ಮುಖಂಡ ಶಂಕರ ಸುತಾರ, ಶಿವಲೀಲಾ ಸಂಕಾಣೆ, ಅನುಶ್ರೀ ಶೇಷಗಿರಿ, ರಾಹುಲ್ ಪವಾರ ಇವರು ಕಲಾವಿದರಿಗೆ ಸನ್ಮಾನಿಸಿ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಲಾವಿದರಾದ ಬಸಯ್ಯ ಸ್ಥಾವರಮಠ (ಸುಗಮ ಸಂಗೀತ), ಅನೀಲ್ ಮಠಪತಿ (ವಚನ ಸಂಗೀತ), ಚೇತನ ಬೀದಿಮನಿ, ನಾಗೇಂದ್ರ ಸಪ್ಪನಗೋಳ ಕರಿಘೋಳೆಪ್ಪ ಸೋನಾರ (ತತ್ವಪದ), ಈಶ್ವರಯ್ಯ ಸ್ವಾಮಿ, ನಾಗಲಿಂಗಯ್ಯ ಸ್ಥಾವರಮಠ(ಜನಪದ ಗಾಯನ), ರಾಚಯ್ಯ ಸ್ವಾಮಿ(ಭಕ್ತಿಗೀತೆ), ಆನಂದ ನಂದಿಕೋಲಮಠ(ಭಾವಗೀತೆ), ಕಾಳಿಕಾ ದೇವಿ ಮಹಿಳಾ ಮಂಡಳ( ಭಜನಾಪದ) ಹೇಳಿಕೊಟ್ಟರು. ಸೈದಪ್ಪ ಚೌಡಾಪೂರ,ಶ್ರೀಶೈಲ್ ಕೊಂಡೆದ, ಶಿವಕುಮಾರ ಪಾಟೀಲ್ ಸಂಗೀತ ನುಡಿಸಿದರು. ಮೌನೇಶ ಪಾಂಚಾಳ, ಶಿವರಾಯ ಉಳ್ಳೆ, ನಾಗರಾಜ ಶೇರಿಕಾರ ತಬಲಾಸಾಥ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News