×
Ad

ಕಲಬುರಗಿ | ʼನನ್ನ ಮತ ಮಾರಾಟಕ್ಕಿಲ್ಲ-ಮತದಾರ ಜಾಗೃತಿ ಆಂದೋಲನʼ ಕಾರ್ಯಕ್ರಮ

Update: 2025-06-30 20:05 IST

ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ, ಎಚ್.ಕೆ.ಇ, ವಾಣಿಜ್ಯ ಮತ್ತು ವಿಜ್ಞಾನ ಮಹಿಳಾ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ʼನನ್ನ ಮತ ಮಾರಾಟಕ್ಕಿಲ್ಲ -ಮತದಾರ ಜಾಗೃತಿ ಆಂದೋಲನʼ ಕಾರ್ಯಕ್ರಮ ನಡೆಯಿತು.

ವಿಶ್ವನಾಥ್ ರೆಡ್ಡಿ ಮುದ್ನಾಳ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ ಬಸವರಾಜ ಮಠಪತಿ ಕಾರ್ಯಕ್ರಮ ಉದ್ಘಾಟಿಸಿ ಬಹುತೇಕ ಎಲ್ಲಾ ರಾಜಕಾರಣಿಗಳು, ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಮಿತಿಮೀರಿ ಹಣ ಹಂಚಿ ಮತದಾರರನ್ನು ದಾರಿ ತಪ್ಪಿಸುತ್ತಿವೆ. ಮತದಾರರು ಜಾಗೃತರಾಗಬೇಕು. ನಮ್ಮ ಮತಕ್ಕೆ ಬೆಲೆ ಕಟ್ಟಲಾಗದಷ್ಟು ಅಮೂಲ್ಯವಾದ ಮೌಲ್ಯವಿದ್ದು, ನಮ್ಮ ಒಂದು ಮತ ನಮ್ಮ ದೇಶವನ್ನು ಸಮೃದ್ಧತೆಯಡೆಗೆ ಒಯ್ಯುವುದಲ್ಲದೆ ನಮ್ಮ ಜೀವನವನ್ನು ಸುಖಮಯವಾಗಿ ಮಾಡುವುದಕ್ಕೆ ಸಹಕಾರಿಯಾಗಿದೆ ಎಂದರು.

ಮತದಾರರು ಚುನಾವಣೆಯಲ್ಲಿ ಹಣ ಹಂಚಲು ಬಂದವರನ್ನು ಧಿಕ್ಕರಿಸಬೇಕು. ಹಣ ಹಂಚಿಕೆಯಿಂದ ದೇಶ ಮತ್ತು ರಾಜ್ಯಗಳಲ್ಲಿ ಭ್ರಷ್ಟಾಚಾರ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಭ್ರಷ್ಟಮುಕ್ತ ಸಮಾಜ ಮತ್ತು ರಾಜಕೀಯ ನಿರ್ಮಾಣದಲ್ಲಿ ಮತದಾರ ಪಾತ್ರ ಬಹುಮುಖ್ಯವಾಗಿದೆ ಎಂದು ತಿಳಿಸಿದ್ದರು.

ರಮೇಶ ಆರ್ ದುತ್ತರಗಿ ಪ್ರಸ್ತಾವಿಕವಾಗಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲರಾದ ಉಷಾದೇವಿ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳು ಪ್ರತಿಯೊಬ್ಬರು ತಪ್ಪದೆ ಮತದಾರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಬೇಕು. ತಪ್ಪದೆ ಮತ ಚಲಾಯಿಸಬೇಕು. ಚುನಾವಣೆಯಲ್ಲಿ ಹಣ ಹಂಚಲು ಬಂದವರನ್ನು ತಿರಸ್ಕರಿಸಬೇಕು. ಕ್ರಿಮಿನಲ್ ಆರೋಪ ಹಿನ್ನೆಲೆ ಉಳ್ಳವರಿಗೆ ಮತ ಹಾಕಬಾರದು. ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ನಮಗೆ ಸರಿ ಎನಿಸದೆ ಇದ್ದ ಪಕ್ಷದಲ್ಲಿ ಕೊನೆಗೆ ನೋಟಾ(NOTA) ಕ್ಕಾದರೂ ಮತ ಹಾಕುವ ಮುಖಾಂತರ ಮತದಾನದಲ್ಲಿ ಭಾಗಿಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. 

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಅನುಸೂಯಾ ಜಿ.ಜೈಬಾ ಅಕ್ತರ್, ಶಿಲ್ಪಕಲಾ ಬಿ., ರಾಜಶ್ರೀ, ಶುಭಾ ,ಉಪಸ್ಥಿತರಿದ್ದರು.

ಪಿಯುಸಿ ದ್ವಿತೀಯ ವಿಜ್ಞಾನ ವಿದ್ಯಾರ್ಥಿನಿ ಸಿದ್ದಮ್ಮ ನಿರೂಪಿಸಿದರು. ಅಕ್ಷತಾ ಪ್ರಾರ್ಥನೆ ಗೀತೆ ಹಾಡಿದರು. ನಾಝಿಯಾ ಸ್ವಾಗತಿಸಿದರು. ಸಮಿನಾ ವಂದಿಸಿದರು. ವಿದ್ಯಾರ್ಥಿನಿಯರಿಗೆ ನನ್ನ ಮತ ಮಾರಾಟಕ್ಕಿಲ್ಲ .ನಾನು ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸುತ್ತೇನೆ ಹಾಗೂ ಕ್ರಿಮಿನಲ್ ಅಪರಾಧ ಹಿನ್ನೆಲೆ ಉಳ್ಳವರಿಗೆ ನಾನು ಮತ ಹಾಕುವುದಿಲ್ಲ, ಎಂದು ಪ್ರತಿಜ್ಞಾವಿಧಿ ಬೋಧಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News