×
Ad

ಕಲಬುರಗಿ | ಮಹಿಳಾ ಕ್ರಿಕೆಟ್ ತಂಡಕ್ಕೆ ಪ್ರಾಶಸ್ತ್ಯ ನೀಡಿರುವುದು ಶ್ಲಾಘನೀಯ : ಸಿಪಿಐ ನಟರಾಜ್ ಲಾಡೆ

Update: 2026-01-24 22:29 IST

ಕಲಬುರಗಿ: ಕ್ರಿಕೆಟ್ ಕ್ಷೇತ್ರದಲ್ಲಿ ಸಾಮಾನ್ಯವಾಗಿ ಪುರುಷರಿಗೆ ಹೆಚ್ಚಿನ ಮನ್ನಣೆ ದೊರಕುತ್ತಿರುವ ಸಂದರ್ಭದಲ್ಲಿ, ಅತಿಥಿ ಉಪನ್ಯಾಸಕರ ಸಂಘವು ಮಹಿಳಾ ಕ್ರಿಕೆಟ್ ತಂಡಕ್ಕೆ ಸಮಾನ ಪ್ರಾಶಸ್ತ್ಯ ನೀಡುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಸಿಪಿಐ ನಟರಾಜ್ ಲಾಡೆ ಹೇಳಿದರು.

ಸಂವಿಧಾನ ದಿನಾಚರಣೆಯ ಅಂಗವಾಗಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರ ಸಂಘದ ವತಿಯಿಂದ ವಿವಿಯ ದೈಹಿಕ ಶಿಕ್ಷಣ ವಿಭಾಗದ ಹೊರಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಂವಿಧಾನ ಪ್ರೀಮಿಯರ್ ಲೀಗ್–2026 ಪುರುಷ ಮತ್ತು ಮಹಿಳಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ಟಾಸ್ ನೆರವೇರಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಆಟಗಳು ಮತ್ತು ಕ್ರೀಡೆಗಳು ಅತ್ಯಂತ ಅವಶ್ಯಕವಾಗಿವೆ. ಕ್ರೀಡೆಗಳಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುವುದರ ಜೊತೆಗೆ ಶೈಕ್ಷಣಿಕ ಸಾಧನೆ, ಸಾಮಾಜಿಕ ಕೌಶಲ್ಯ ಮತ್ತು ಸ್ವಮೌಲ್ಯ ಬಲಪಡಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಾಗನಹಳ್ಳಿ ಪೊಲೀಸ್ ತರಬೇತಿ ಕೇಂದ್ರದ ಫೊರೆನ್ಸಿಕ್ ಅಧಿಕಾರಿ ಡಾ. ದಿಲೀಪ್ ಕುಮಾರ್ ನವಲೆ, ಸಂವಿಧಾನ ಪ್ರೀಮಿಯರ್ ಲೀಗ್‌ ಆಯೋಜಿಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು. ವಿದ್ಯಾರ್ಥಿಗಳು ಗೆಲುವು–ಸೋಲುಗಳನ್ನು ಸಮಾನ ಮನೋಭಾವದಿಂದ ಸ್ವೀಕರಿಸಬೇಕು. ಇಂತಹ ಕ್ರೀಡಾ ಚಟುವಟಿಕೆಗಳು ವಿಶ್ವವಿದ್ಯಾಲಯದ ಆವರಣದಲ್ಲಿ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು. ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡ ಆಟಗಾರರಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಆಡುವ ಅವಕಾಶ ಸಿಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಡಾ. ಎಂ.ಬಿ. ಕಟ್ಟಿ, ಅಧ್ಯಕ್ಷ ಡಾ. ಅರುಣಕುಮಾರ ಬಿ. ಕುರನೆ, ಪ್ರಧಾನ ಕಾರ್ಯದರ್ಶಿ ಡಾ. ಅಶೋಕ ದೊಡ್ಮನಿ, ಡಾ. ಹಣಮಂತ ಮೇಲಕೇರಿ, ಸುನೀಲ ಜಾಬಾದಿ, ಸಂತೋಷ ಕಂಬಾರ, ಪ್ರಕಾಶ್ ಸಂಗಮ, ಡಾ. ಮಾಧುರಿ ಬಿರಾದಾರ, ಡಾ. ಶಿವಶರಣಪ್ಪ ಕೊಡ್ಲಿ, ಡಾ. ರೂಕ್ಸನಾ, ಡಾ. ಶಂಭುಲಿಂಗ ನಾಡಿಗೇರಿ, ಡಾ. ಆನಂದ ಮೇಟಿ ಉಪಸ್ಥಿತರಿದ್ದರು.

ನಿರ್ಣಾಯಕರಾಗಿ ಪುಟ್ಟರಾಜ ಮಡಿವಾಳ, ಅಜಯ ರಾಠೋಡ್, ಓಂಕಾರ ಮಡಿವಾಳ, ಗಣೇಶ ಮದರಿ, ಸಾವಿರಲಿಂಗ ಕಾರ್ಯನಿರ್ವಹಿಸಿದರು. ಅತಿಥಿ ಉಪನ್ಯಾಸಕರಾದ ಡಾ. ಪರಶುರಾಮ ಪಿ, ಡಾ. ಶೇಖರ ಸಲಗರ, ಡಾ. ಶಿವಾನಂದ ಕಡಗಂಚಿ, ಡಾ. ಮಿಲಿಂದ ಕಾಂಬಳೆ, ಡಾ. ತಾತ್ಯಾರಾವ, ಡಾ. ಮಂಜೂರ್ ಅಹ್ಮದ, ಡಾ. ಸಿದ್ಧಾರ್ಥ ಬಬಲಾದ, ಡಾ. ರಾಜಕುಮಾರ ಎಂ. ದಣ್ಣೂರ, ಡಾ. ಕವಿತಾ ನಾಗಶೆಟ್ಟಿ, ಡಾ. ಚಿಂತನ ರಾಠೋಡ್, ಡಾ. ರಾಜೇಶ್ವರಿ, ಡಾ. ಮಹಾಲಿಂಗಪ್ಪ ಮಂಗಳೂರು, ಅಭಯಕುಮಾರ ಪೋತೆ, ಡಾ. ಸಂದೀಪ ಹೋಲ್ಕರ್, ಡಾ. ನಂದಿನಿ, ಡಾ. ವಿಜಯಕುಮಾರ ಬೀಳಗೆ ಸೇರಿದಂತೆ ಹಲವರು ಭಾಗವಹಿಸಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News