ಕಲಬುರಗಿ | ಹಿರಿಯ ಪತ್ರಕರ್ತ ಸೂರ್ಯಕಾಂತ್ ಎಂ.ಜಮಾದಾರ್ ಅವರಿಗೆ ಸ್ನೇಹಶ್ರೀ ಪ್ರಶಸ್ತಿ
ಕಲಬುರಗಿ: ಇಲ್ಲಿನ ಅಖಿಲ ಕರ್ನಾಟಕ ಸ್ನೇಹ ಗಂಗವಾಹಿನಿ ಸಂಸ್ಥೆ ಕೊಡ ಮಾಡುವ ಸ್ನೇಹ ಶ್ರೀ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತರಾದ ವರದಿಗಾರ ಸೂರ್ಯಕಾಂತ್ ಎಂ.ಜಮಾದಾರ್ ಅವರಿಗೆ ನೀಡಿ ಗೌರವಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಡಾ.ಬಿ.ಪಿ.ಬುಳ್ಳ ತಿಳಿಸಿದ್ದಾರೆ.
ಸೂರ್ಯಕಾಂತ್ ಜಮಾದಾರ್ ಅವರು ಕಳೆದ 30 ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವೆ ಹಾಗೂ ಕೋಲಿ ಸಮಾಜದ ಪ್ರತಿ ಅವರಿಗಿರುವ ಪ್ರೀತಿ ವಿಶ್ವಾಸ ಹಾಗೂ ಕಾಳಜಿಯನ್ನು ಗಮನಿಸಿ ನಮ್ಮ ಸಂಸ್ಥೆಯ ಸರ್ವ ಸದಸ್ಯರ ಅಭಿಪ್ರಾಯದಂತೆ ಈ ವರ್ಷದ ಸ್ನೇಹ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಜೂ.29ರಂದು ಬೆಳಗ್ಗೆ ನಗರದ ಸ್ನೇಹ ಗಂಗಾವಾಹಿನಿ ಸಂಸ್ಥೆಯ ದಿ.ಕಸ್ತೂರಿಬಾಯಿ ಬುಳ್ಳಾ ಸ್ಮಾರಕ ಭವನದ ಸಭಾಂಗಣದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಆದ್ದರಿಂದ ಕೋಲಿ ಸಮಾಜದ ಬಂಧುಗಳು ಹಾಗೂ ಸ್ನೇಹಿತರು ಹಾಗೂ ಹಿತೈಷಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿ ಮಾಡಬೇಕು ಎಂದು ಡಾ.ಬುಳ್ಳಾ ಮನವಿ ಮಾಡಿದ್ದಾರೆ.