×
Ad

ಕಲಬುರಗಿ: ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಲಯ ಪದಾಧಿಕಾರಿಗಳ ಆಯ್ಕೆ

Update: 2025-06-14 23:17 IST

ಕಲಬುರಗಿ: ಕನ್ನಡ ಭವನದಲ್ಲಿ ಕನ್ನಡ ಕ್ರಿಯಾ ಸಮಿತಿಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಲಯ ಹಾಗೂ ವಿಭಾಗ ಒಂದರ ಕನ್ನಡ ಕ್ರಿಯಾ ಸಮಿತಿಯ ಸಭೆ ನಡೆಸಿ ಈ ಸಭೆಯಲ್ಲಿ ನೂತನ ಕನ್ನಡ ಕ್ರಿಯಾ ಸಮಿತಿಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಲಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಕನ್ನಡ ಕ್ರಿಯಾ ಸಮಿತಿಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಲಯ ಅಧ್ಯಕ್ಷರಾಗಿ ವಿಠ್ಠಲ ಎನ್. ಭೀಮನ್, ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ್ ಪಾಟೀಲ್, ಖಜಾಂಜಿಯಾಗಿ ವೀರಭದ್ರಪ್ಪ ಅರಿಕೇರಿ ಹಾಗೂ ವಿಭಾಗ ಒಂದರ ಕನ್ನಡ ಕ್ರಿಯಾ ಸಮಿತಿಯ ಅಧ್ಯಕ್ಷರಾಗಿ ಸಿದ್ದರಾಮಯ್ಯ ಕಲಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಗುರುಶಾಂತ ಗೌಡ, ಖಜಾಂಚಿಯಾಗಿ ಸುನೀಲ ಶಾಖಾ ಇವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಭುಸ್ವಾಮಿ, ರಾಜ್ಯ ಖಚಾಂಚಿ ಹುಸೇನ್, ರಾಜ್ಯ ಕಾರ್ಯದರ್ಶಿ ರಮೇಶ, ಕಸಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೆಗಲತಿಪ್ಪಿ ಸೇರಿದಂತೆ ವಿಭಾಗಿಯ ಪದಾಧಿಕಾರಿಗಳು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News