×
Ad

ಕಾಸರಗೋಡು: 77 ನೇ ಗಣರಾಜ್ಯೋತ್ಸವ; ಅರಣ್ಯ ಸಚಿವ ಶಶೀಂದ್ರನ್ ಧ್ವಜಾರೋಹಣ

Update: 2026-01-26 13:47 IST

ಕಾಸರಗೋಡು: ಗಣರಾಜ್ಯೋತ್ಸವದ ಅಂಗವಾಗಿ ಕಾಸರಗೋಡು ನಗರಸಭಾ ಸ್ಟೇಡಿಯಂನಲ್ಲಿ ನಡೆದ ಧ್ವಜಾರೋಹಣವನ್ನು ಕೇರಳ ಅರಣ್ಯ ಸಚಿವ ಎ.ಕೆ. ಶಶೀಂದ್ರನ್ ನೆರವೇರಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಭರತ್ ರೆಡ್ಡಿ, ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಹೆಚ್ಚುವರಿ ದಂಡನಾಧಿಕಾರಿ ಪಿ. ಅಖಿಲ್ ಅವರು ಪರೇಡ್‌ನಲ್ಲಿ ಗೌರವ ವಂದನೆ ಸ್ವೀಕರಿಸಿದರು.

ಪರೇಡ್‌ನ ಪ್ರಥಮ ಕಮಾಂಡೆಂಟ್ ಆಗಿ ಶಿವಂ ಐಪಿಎಸ್ ಹಾಗೂ ದ್ವಿತೀಯ ಇನ್‌ಕಮಾಂಡ್ ಆಗಿ ಕಾಸರಗೋಡು ವಿಶೇಷ ಶಾಖೆಯ ಸಬ್‌ಇನ್‌ಸ್ಪೆಕ್ಟರ್ ಎಂ. ಸದಾಶಿವನ್ ಪಥಸಂಚಲನಕ್ಕೆ ನೇತೃತ್ವ ವಹಿಸಿದರು.

ಕಾಸರಗೋಡು ಜಿಲ್ಲಾ ಪೊಲೀಸ್ ಪ್ರಧಾನ ಕಚೇರಿ ಸಬ್‌ಇನ್‌ಸ್ಪೆಕ್ಟರ್ ಗೋಪಿನಾಥನ್ ನೇತೃತ್ವದ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ, ವಿದ್ಯಾನಗರ ಪೊಲೀಸ್ ಠಾಣೆ ಸಬ್‌ಇನ್‌ಸ್ಪೆಕ್ಟರ್ ಎಸ್. ಅನೂಪ್ ನೇತೃತ್ವದ ಸ್ಥಳೀಯ ಪೊಲೀಸರು, ಸಬ್‌ಇನ್‌ಸ್ಪೆಕ್ಟರ್ ಎಂ.ವಿ. ಶರಣ್ಯ ನೇತೃತ್ವದ ಕಾಸರಗೋಡು ಮಹಿಳಾ ಕೋಶದ ಮಹಿಳಾ ಪೊಲೀಸ್ ಪಡೆ, ಅಬಕಾರಿ ನಿರೀಕ್ಷಕ ಜಿ. ಆದರ್ಶ್ ನೇತೃತ್ವದ ಅಬಕಾರಿ ವಿಭಾಗ, ಕೆ.ವಿ. ಬಿಜು ನೇತೃತ್ವದ ಕಾಸರಗೋಡು ಸಮುದಾಯ ಪೊಲೀಸ್ ವಿದ್ಯಾರ್ಥಿ ಪೊಲೀಸ್ ಪಡೆ, ಕಾಸರಗೋಡು ಸರ್ಕಾರಿ ಕಾಲೇಜಿನ ಹಿರಿಯ ವಿಭಾಗದ ಎನ್‌ಸಿಸಿ ಪಡೆಗಳು ಪರೇಡ್‌ನಲ್ಲಿ ಭಾಗವಹಿಸಿದವು.

ಹಿರಿಯ ಅಂಡರ್ ಆಫೀಸರ್ ಕೆ. ದರ್ಶನ ನೇತೃತ್ವದಲ್ಲಿ ಕಾಞಂಗಾಡ್‌ನ ನೆಹರು ಕಲಾ ಮತ್ತು ವಿಜ್ಞಾನ ಕಾಲೇಜಿನ ಎನ್‌ಸಿಸಿ, ಸಾರ್ಜೆಂಟ್ ಎಚ್.ಆರ್. ಧನ್ವಿ ನೇತೃತ್ವದ ಕಾಞಂಗಾಡ್‌ನ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯ ಜೂನಿಯರ್ ಎನ್‌ಸಿಸಿ, ಸಿ.ಕೆ. ಮೊಹಮ್ಮದ್ ಶಿಸನ್ ನೇತೃತ್ವದ ಉಳಿಯತುಡ್ಕದ ಜೈ ಮಾತಾ ಸೀನಿಯರ್ ಸೆಕೆಂಡರಿ ಶಾಲೆಯ ಬ್ಯಾಂಡ್ ಪಾರ್ಟಿ, ಆರನ್ ಶಿವ ನೇತೃತ್ವದ ಕರಡುಕ ಸರ್ಕಾರಿ ವೃತ್ತಿಪರ ಪ್ರೌಢಶಾಲೆಯ ಜೂನಿಯರ್ ಎನ್‌ಸಿಸಿ ಪಡೆ, ಜಿ.ಎಚ್.ಎಸ್.ಎಸ್‌ನ ವಾಯುಪಡೆ ಜೂನಿಯರ್ ಎನ್‌ಸಿಸಿ ಪಡೆಗಳು ಭಾಗವಹಿಸಿದ್ದವು.

ಸಾರ್ಜೆಂಟ್ ಎಂ. ನಿರಂಜನ್ ನೇತೃತ್ವದ ಚೆಮ್ಮನಾಡ್ ಶಾಲೆ, ನೀಲೇಶ್ವರಂ ರಾಜಾಸ್ ಹೈಯರ್ ಸೆಕೆಂಡರಿ ಶಾಲೆಯ ಜೂನಿಯರ್ ಡಿವಿಷನ್ ಎನ್‌ಸಿಸಿ, ಉದಿನೂರ್ ಹೈಯರ್ ಸೆಕೆಂಡರಿ ಶಾಲೆಯ ನೇವಲ್ ವಿಂಗ್ ಸ್ಟೂಡೆಂಟ್ ಪೊಲೀಸ್ ಕೆಡೆಟ್, ದಿಯಾ ಪಾರ್ವತಿ ನೇತೃತ್ವದ ಎನ್‌ಎಚ್‌ಎಸ್‌ಎಸ್ ಪೆರ್ಡಾಲ ಸ್ಟೂಡೆಂಟ್ ಪೊಲೀಸ್ ಕೆಡೆಟ್, ಕೆ.ಆರ್. ಅನಸ್ವರ ನೇತೃತ್ವದ ಜಿ.ಎಂ.ಆರ್. ಎಚ್‌ಎಸ್‌ಎಸ್ ಗರ್ಲ್ಸ್ ಪರವನಡುಕ್ಕಂ ಸ್ಟೂಡೆಂಟ್ ಪೊಲೀಸ್ ಕೆಡೆಟ್, ಶಿವನ್ಯಾ ನೇತೃತ್ವದ ಕುಂದಂಕುಳಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಸ್ಟೂಡೆಂಟ್ ಪೊಲೀಸ್ ಕೆಡೆಟ್, ಪಿ.ಪಿ. ಆದಿಲ್ ರಾಜ್ ನೇತೃತ್ವದ ಕಾಞಂಗಾಡ್ ಕ್ರೈಸ್ಟ್ ಸಿ.ಎಂ.ಐ. ಪಬ್ಲಿಕ್ ಸ್ಕೂಲ್ ಸ್ಕೌಟ್ಸ್ ಮತ್ತು ಗೈಡ್ಸ್ ಪಡೆಗಳು ಪಥಸಂಚಲನ ನಡೆಸಿದವು.

ಕಾರ್ಯಕ್ರಮದಲ್ಲಿ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕರಾದ ಎನ್.ಎ. ನೆಲ್ಲಿಕುನ್ನು, ಇ. ಚಂದ್ರಶೇಖರನ್, ಸಿ.ಎಚ್. ಕುಂಞಬು, ಎ.ಕೆ.ಎಂ. ಅಶ್ರಫ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ, ಉಪಾಧ್ಯಕ್ಷ ಕೆ.ಕೆ. ಸೋಯಾ, ಕಾಸರಗೋಡು ಪುರಸಭೆ ಅಧ್ಯಕ್ಷೆ ಶಾಹಿನಾ ಸಲೀಂ, ಕಾಸರಗೋಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಅಬ್ದುಲ್ಲಾ ಕುಂಜಿ ಚೆರ್ಕಳ, ಉಪಾಧ್ಯಕ್ಷೆ ಉಷಾ ಅರ್ಜುನ್, ಚೆಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ವಸಂತನ್ ಸೇರಿದಂತೆ ಇತರ ಜನಪ್ರತಿನಿಧಿಗಳು, ಸರ್ಕಾರಿ ನೌಕರರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.







 



 



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News