ಕಾಸರಗೋಡು | ಮಸೀದಿ ಆವರಣದಲ್ಲಿ ನಿಲ್ಲಿಸಿದ್ದ ಕಾರು ಬೆಂಕಿಗಾಹುತಿ
Update: 2025-07-31 11:45 IST
ಕಾಸರಗೋಡು: ಮಸೀದಿಯ ಆವರಣದ ಒಳಗೆ ನಿಲ್ಲಿಸಿದ್ದ ಕಾರೊಂದು ಬೆಂಕಿಗಾಹುತಿಯಾದ ಘಟನೆ ನೆಲ್ಲಿಕಟ್ಟೆ ಸಮೀಪದ ಪೈಕ ಎಂಬಲ್ಲಿ ಗುರುವಾರ ಮುಂಜಾನ ನಡೆದಿದೆ.
ಇಂದು ಮುಂಜಾನೆ ಮೂರುಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಬೆಂಕಿಯಿಂದ ಕಾರು ಸಂಪೂರ್ಣ ಉರಿದಿದೆ. ಕಾಸರಗೋಡಿನಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು.
ಕಾರಿನಲ್ಲಿದ್ದ ಪಾಸ್ ಫೋರ್ಟ್ ಸೇರಿದಂತೆ ಇತರ ದಾಖಲೆಗಳು ಸುಟ್ಟು ಭಸ್ಮವಾಗಿವೆ. ಸಮೀಪದಲ್ಲೇ ಇದ್ದ ಶಾಲಾ ಬಸ್ ಮತ್ತು ಸ್ಕೂಟರ್ ಗೂ ಹಾನಿ ಉಂಟಾಗಿದೆ.
ಮಸೀದಿಯ ಉಸ್ತಾದ್ ರಝಾ ಬಾಫಖಿ ಹೈತಮಿ ಎಂಬವರಿಗೆ ಸೇರಿದ ಕಾರು ಎಂದು ತಿಳಿದುಬಂದಿದೆ. ಬೆಂಕಿಗೆ ಕಾರಣ ತಿಳಿದುಬಂದಿಲ್ಲ.