×
Ad

ಆರಿಕ್ಕಾಡಿ ಟೋಲ್ ಗೇಟ್ ಮತ್ತೆ ಕಾರ್ಯಾರಂಭ: ಟೋಲ್ ಪ್ರಶ್ನಿಸಿದ ವ್ಯಕ್ತಿಯನ್ನು ಬಲವಂತವಾಗಿ ಹೊತ್ತೊಯ್ದ ಪೊಲೀಸರು : ಆರೋಪ

ಪೊಲೀಸ್ ದೌರ್ಜನ್ಯ ಖಂಡಿಸಿ ಇಂದು ಯುಡಿಎಫ್ ನಿಂದ ಕುಂಬಳೆ ಠಾಣೆಗೆ ಮುತ್ತಿಗೆ

Update: 2026-01-29 10:42 IST

ಕಾಸರಗೋಡು: ರಾಷ್ಟೀಯ ಹೆದ್ದಾರಿಯ ಕುಂಬಳೆಯ ಆರಿಕ್ಕಾಡಿಯಲ್ಲಿ ಹೆದ್ದಾರಿ ಪ್ರಾಧಿಕಾರ ನಿರ್ಮಿಸಿರುವ ಟೋಲ್ ಗೇಟ್ ವಿರುದ್ದ ಸಲ್ಲಿಕೆಯಾಗಿರುವ ದೂರಿಗೆ ಸಂಬಂಧಿಸಿ ಅಂತಿಮ ತೀರ್ಪನ್ನು ಕೇರಳ ಹೖಕೋರ್ಟು ಮತ್ತೆ ಮುಂದೂಡಿದ ಬೆನ್ನಲ್ಲೇ ಇಲ್ಲಿ ಟೋಲ್ ವಸೂಲಿ ಪುನರಾಂಭಗೊಂಡಿದೆ.

ಬುಧವಾರ ಸಂಜೆಯಿಂದ ಟೋಲ್ ಗೇಟ್ ನಲ್ಲಿ ಟೋಲ್ ವಸೂಲಿ ಆರಂಭಗೊಂಡಿದ್ದು. ಜನಾಕ್ರೋಶಕ್ಕೆ ಕಾರಣವಾಗಿದೆ.

ಟೋಲ್ ಪ್ರಶ್ನಿಸಿದ ವ್ಯಕ್ತಿಯ ಮೇಲೆ ಪೊಲೀಸ್ ದೌರ್ಜನ್ಯ: ಆರೋಪ

ಈ ಮಧ್ಯೆ ಟೋಲ್ ವಸೂಲಿ ಪ್ರಶ್ನಿಸಿದ ವ್ಯಕ್ತಿಯೊಬ್ಬರ ಮೇಲೆ ಆತನ ಕುಟುಂಬದವರ ಎದುರೇ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬುಧವಾರ ಸಂಜೆ ಕಾರಿನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೋರ್ವ ಆರಿಕ್ಕಾಡಿ ಟೋಲ್ ಗೇಟಲ್ಲಿ ಟೋಲ್ ಸಂಗ್ರಹ ಪುನರಾರಂಭಿಸಿರುವುದನ್ನು ಪ್ರಶ್ನಿಸಿದ್ದಾನೆ. ಈ ವೇಳೆ ಆತನನ್ನು ತಡೆದ ಪೊಲೀಸರು ಬಲವಂತವಾಗಿ ಕಾರಿನಿಂದ ಹೊರಗೆಳೆದು ಕ್ರಿಮಿನಲ್ ಆರೋಪಿಯನ್ನು ಕೊಂಡೊಯ್ಯುವಂತೆ ಹೊತ್ತೊಯ್ದಿದ್ದಾರೆ. ಈ ವೇಳೆ ಕಾರಿನಲ್ಲಿ ಸಂತ್ರಸ್ತನ ಕುಟುಬವು ಇತ್ತು. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರಿಂದ ಮಾನ ಹಕ್ಕುಗಳ ಉಲ್ಲಂಘಟನೆಯಾಗಿದೆ ಎಂಬ ಆರೋಪ ಕೇಳಿಬಂದಿದೆ.

ಟೋಲ್ ಸಂಗ್ರಹವನ್ನು ಪ್ರಶ್ನಿಸಿದ ಕಾರಣಕ್ಕೆ ಮನೆಮಂದಿಯ ಎದುರು ವ್ಯಕ್ತಿಯೋರ್ವನ ಮೇಲೆ ಕುಂಬಳೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿರುವ ಯುಡಿಎಫ್ ಮಂಜೇಶ್ವರ ಮಂಡಲ ಸಮಿತಿಯು ಇಂದು(ಜ.29) ಸಂಜೆ ಕುಂಬಳೆ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಪ್ರಕಟನೆ ಹೊರಡಿಸಿದೆ.

ಆರಿಕ್ಕಾಡಿ ಟೋಲ್ ಗೇಟ್ ವಿರುದ್ಧ ಟೋಲ್ ವಿರೋಧಿ ಕ್ರಿಯಾ ಸಮಿತಿ ಈಗಾಗಲೇ ಸಲ್ಲಿಸಿರುವ ದೂರಿಗೆ ಸಂಬಂಧಿಸಿ ಕೇರಳ ಹೈಕೋರ್ಟ್ ಬುಧವಾರ ಅಂತಿಮ ತೀರ್ಪು ನೀಡಬೇಕಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪರ ವಕೀಲರು ಕೋರ್ಟ್ ಗೆ ಗೈರುಹಾಜರಾದ ಕಾರಣ ಹೈಕೋರ್ಟ್ ಪ್ರಕರಣವನ್ನು ಫೆ.11ಕ್ಕೆ ಮುಂದೂಡಿತ್ತು.

ಈ ಕೇಸಿಗೆ ಸಂಬಂಧಿಸಿ ವಾರದ ಹಿಂದೆ ಕೇರಳ ಹೖಕೋರ್ಟು ಹೆದ್ದಾರಿ ಪ್ರಾಧಿಕಾರದ ಲೋಪವನ್ನು ಉಲ್ಲೇಖಿಸಿತ್ತು. ಟೋಲ್ ವಸೂಲಿಗೆ ಇಷ್ಟೊಂದು ಆತುರ ಏಕೆ ಎಂದು ಪ್ರಶ್ನಿಸಿತ್ತು. ಈ ಮಧ್ಯೆ ನ್ಯಾಯಾಲಯ ತೀರ್ಪು ಪ್ರಕಟಿಸುವ ಮುನ್ನವೇ ಅಧಿಕೃತವಾಗಿ ಟೋಲ್ ವಸೂಲಿ ಆರಂಭಿಸಿರುವುದು ನಾಗರಿಕರ ವಿರೋಧಕ್ಕೆ ಕಾರಣವಾಗಿದೆ.

ಕುಂಬಳೆಯಲ್ಲಿ ಟೋಲ್ ವಸೂಲಿ ಪುನಾರಂಭ, ಪೊಲೀಸರ ದೌರ್ಜನ್ಯವನ್ನು ಖಂಡಿಸಿ ಗುರುವಾರ(ಜ.29) ಸಂಜೆ ಕುಂಬಳೆ ಠಾಣೆಗೆ ಮುತ್ತಿಗೆ ಹಾಕಲು ಯುಡಿಎಫ್ ಮಂಜೇಶ್ವರ ಮಂಡಲ ಸಮಿತಿ ತೀರ್ಮಾನಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News