Kolar | ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆಗೆ ಯತ್ನ; ಅವಳಿ ಮಕ್ಕಳ ಮೃತ್ಯು
ಕೋಲಾರ, ಮಾ.2: ಕೌಟುಂಬಿಕ ಕಲಹದ ಹಿನ್ನೆಲೆ ಇಬ್ಬರು ಮಕ್ಕಳೊಂದಿಗೆ ತಾಯಿ ನೀರಿನ ಸಂಪಿಗೆ ಬಿದ್ದು ಆತ್ಮಹತ್ಯೆಗೆ ಯತ್ನ ನಡೆಸಿದ್ದು, ಅದೃಷ್ಟವಶಾತ್ ತಾಯಿ ರಕ್ಷಣೆಯಾಗಿದ್ದು, ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ವರದಿಯಾಗಿದೆ.
ಇಬ್ಬರು ಮಕ್ಕಳು ಸಂಪಿನಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿರುವ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಬೂದಿಕೋಟ ಗ್ರಾಮದಲ್ಲಿ ಜರುಗಿದೆ . ಸೋಮವಾರ ಬೆಳಗ್ಗೆ ಕೌಟುಂಬಿಕ ಕಲಹದಿಂದ ಬೇಸತ್ತ ಕೋಡಗುರ್ಕಿ ಗ್ರಾಮದ ಉಷಾ(28) ತನ್ನ ಮೂರು ವರ್ಷಗಳ ಅವಳಿ ಮಕ್ಕಳಾದ ಹರ್ಷಿತ್ ಮತ್ತು ಹಿತೇಶ್ ಬೂದಿಕೋಟಿಯ ಹೈದರಾಲಿ ಕೋಟೆಯ ಸಮಿಪದ ಸಂಪಿನಲ್ಲಿ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದು, ಅದೃಷ್ಟವಶಾತ್ ಜನರು ನೋಡಿ ತಾಯಿಯನ್ನು ರಕ್ಷಣೆ ಮಾಡಿದ್ದು, ಮಕ್ಕಳಿಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಎಂಟು ವರ್ಷಗಳ ಹಿಂದೆ ಕಾರಹಳ್ಳಿಯ ಉಷಾ ಅವರನ್ನು ಮುರಳಿಗೆ ನೀಡಿ ಮದುವೆ ಮಾಡಲಾಗಿತ್ತು. ಮೊದಲು ಅನೋನ್ಯವಾಗಿದ್ದ ಇದ್ದಂತಹ ದಂಪತಿ ನಡುವೆ ಪ್ರತಿದಿನ ಸಣ್ಣಪುಟ್ಟ ವಿಷಯಗಳಿಗೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಈ ಸಂಬಂಧ ಬೂದಿಕೋಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.