ಕೋಲಾರ: ದೇವಾಲಯದ ಪೂಜಾರಿ ಹತ್ಯೆ
Update: 2026-01-19 23:51 IST
ಸಾಂದರ್ಭಿಕ ಚಿತ್ರ (AI)
ಕೋಲಾರ: ದೇವಾಲಯ ಪೂಜಾರಿಯೊಬ್ಬರನ್ನು ದುಷ್ಕರ್ಮಿಗಳು ಹತ್ಯೆಗೈದಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ವರದಿಯಾಗಿದೆ.
ಕೆಮಾಲೂರು ತಾಲ್ಲೂಕು ಕಲ್ಲೂರು ಗ್ರಾಮದ ಚೌಡೇಶ್ವರಿ ದೇವಾಲಯದ ಪೂಜಾರಿ ಆಂಜಿ ಆಂಜಿನಪ್ಪ(45) ಮೃತಪಟ್ಟವರು.
ರವಿವಾರ ಸಂಜೆ ಕಾರ್ಯನಿಮಿತ್ತ ಮಾಲೂರು ನಗರಕ್ಕೆ ತೆರಳಿ ರಾತ್ರಿ ವಾಪಸ್ಸು ಬೈಕ್‌ನಲ್ಲಿ ಬರುತ್ತಿದ್ದವರನ್ನು ಕೊಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಕೋಲಾರ ಜಿಲ್ಲೆ ಮಾಲೂರು ತಾಲೂಕು ಹರಳೇರಿ ಬಳಿ ಕೊಲೆ ನಡೆದಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಮಾಲೂರು ಪೊಲೀಸರ ಭೇಟಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.