×
Ad

ಕೊಪ್ಪಳ | ದಲಿತ ಯುವಕನ ಮನೆಗೆ ಬೆಂಕಿ ಹಚ್ಚಿದ ಆರೋಪ: ಎಂಟು ಮಂದಿಯ ವಿರುದ್ಧ ಪ್ರಕರಣ ದಾಖಲು

Update: 2025-10-17 14:33 IST

ಕೊಪ್ಪಳ : ಯಲಬುರ್ಗಾ ತಾಲ್ಲೂಕಿನ ಕೋನಸಾಗರ ಗ್ರಾಮದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಯುವಕನ ಮನೆಗೆ ಬೆಂಕಿ ಹಚ್ಚಿದ ಆರೋಪದ ಮೇಲೆ ಎಂಟು ಮಂದಿಯ ವಿರುದ್ಧ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ವರದಿಯಾಗಿದೆ.

ಮಣಿಕಂಠಯ್ಯ (18) ಎಂಬವರ ಮನೆ ಕಾಮಗಾರಿ ನಡೆಯುತ್ತಿದ್ದು, ಇದರಿಂದ ಅವರು ಬಾಡಿಗೆ ಮನೆ ಪಡೆದು ವಾಸವಾಗಿದ್ದರು. ಈ ಮನೆಯ ಮುಂದೆ ಚಪ್ಪರವಿದೆ. ಗುರುವಾರ ರಾತ್ರಿ ಒಂದು ಗಂಟೆಯ ಸುಮಾರಿಗೆ ಮಣಿಕಂಠಯ್ಯ ಮೊಬೈಲನ್ನು ಚಾರ್ಜ್ ಗೆ ಹಾಕಲು ಎದ್ದಾಗ ಮನೆಗೆ ಬೆಂಕಿ ಹತ್ತಿಕೊಂಡಿರುವುದನ್ನು ನೋಡಿದ್ದಾರೆ, ಇದರಿಂದ ಗಾಬರಿ ಗೊಂಡ ಮಣಿಕಂಠಯ್ಯ ಅವರು ಕೂಗಾಡಿದ್ದಾರೆ, ಕೂಗಾಟವನ್ನು ಕೇಳಿದ ಇವರ ಪಕ್ಕದ ಮನೆಯಲ್ಲಿದ್ದ ಅವರ ಮಾವ ಮೌನೇಶ ಬಂದು ರಕ್ಷಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹನುಮಂತಪ್ಪ ನಾಗಪ್ಪ ಜೂಲಕಟ್ಟಿ, ಭೀಮಪ್ಪ ಹನಮಪ್ಪ ಜೂಲಕಟ್ಟಿ, ನಿಂಗಪ್ಪ ಹನಮಪ್ಪ ಜೂಲಕಟ್ಟಿ, ದೊಡ್ಡಬಸಪ್ಪ ಲಕ್ಕಲಕಟ್ಟಿ, ಮಲ್ಲಪ್ಪ ರಾಮಪ್ಪ ಭಜಂತ್ರಿ, ಚಿಕ್ಕಬನ್ನಿಗೋಳದ ಪ್ರವೀಣ ಪರಸಪ್ಪ ಹಟ್ಟಿ, ಹೊನ್ನಕೇರಪ್ಪ ಬಸಪ್ಪ ಹಟ್ಟಿ, ಬಾಳಪ್ಪ ಪರಸಪ್ಪ ಹಟ್ಟಿ ಎಂಬುವರು ಬೆಂಕಿ ಹಚ್ಚಿರಬಹುದು ಎಂದು ಮಣಿಕಂಠಯ್ಯ ಅವರು ಶಂಕೆ ವ್ಯಕ್ತಪಡಿಸಿದ್ದು, ಇದರಿಂದ ಇವರ ಮೇಲೆ ಪ್ರಕರಣ ದಾಖಲಾಗಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ರಾಮ್‌ ಎಲ್‌.ಅರಸಿದ್ದಿ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದರು. ತನಿಖೆ ಮುಂದುವರೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News