×
Ad

ಪ್ರವಾದಿ ಮುಹಮ್ಮದರು ಹೇಳಿದ ಸತ್ಯವನ್ನೇ ಭಾರತೀಯ ಪುರಾಣಗಳು ಹೇಳಿವೆ: ಲಾಲ್ ಹುಸೇನ್ ಕಂದ್ಗಲ್

Update: 2025-10-02 18:40 IST

ಕೊಪ್ಪಳ/ ಗಂಗಾವತಿ: ’ಕುರ್‌ಆನ್ ಬರುವ ಮುಂಚೆ ಪ್ರವಾದಿ ಮುಹಮ್ಮದರು ಹೇಳಿದ ಸತ್ಯವನ್ನೇ ಭಾರತೀಯ ಪುರಾಣಗಳು ಹೇಳಿವೆ ಎಂದು ಕನ್ನಡ ವಾಗ್ಮಿಗಳಾದ ಲಾಲ್ ಹುಸೇನ್ ಕಂದ್ಗಲ್ ಹೇಳಿದರು.

ನಗರದಲ್ಲಿ ಜಮಾಅತೆ ಇಸ್ಲಾಂ ಹಿಂದ್ ಗಂಗಾವತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್ (ಸ) ಸೀರತ್ ಅಭಿಯಾನದ ವಿಚಾರಗೋಷ್ಠಿ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅದ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾನತೆ, ಸೌಹಾರ್ದತೆ, ಲೋಕಕಲ್ಯಾಣ, ಅಂಗವಿಕಲರಿಗೆ ಅನುಕಂಪದ ಬಗ್ಗೆ ಹೆಚ್ಚಿನ ಆದ್ಯತೆ ನೀಡಿದ್ದ ಪ್ರವಾದಿಗಳ ಸಂದೇಶಗಳನ್ನು ನಾವೆಲ್ಲರೂ ಪಾಲನೆ ಮಾಡಬೇಕಿದೆ ಎಂದರು.

ಪ್ರವಾದಿ ಮುಹಮ್ಮದ್(ಸ) ಅವರು ಸದಾ “ಶಾಂತಿ ಮತ್ತು ಸಹೋದರತ್ವವೇ ನಿಜವಾದ ಜೀವನದ ಆಧಾರ, ಜನರಿಗೆ ಸೇವೆ ಮಾಡುವುದು ದೇವರ ಸೇವೆಗೆ ಸಮ ಎಂದರು. ಬಡವರಿಗೂ, ಅನಾಥರಿಗೂ ಸಹಾಯ ಮಾಡಲು ಉತ್ತೇಜಿಸಿದರು. ಎಲ್ಲರೊಂದಿಗೆ ಕರುಣೆ, ದಯೆ, ಸಹಾನು ಭೂತಿ ತೋರಬೇಕು. ಧರ್ಮ ಬೇರೆ ಇದ್ದರೂ ಮನುಷ್ಯತ್ವ ಎಲ್ಲರಲ್ಲೂ ಒಂದೇ ಎಂದರು. ಜೀವನದಲ್ಲಿ ಸತ್ಯ, ಪ್ರಾಮಾಣಿಕತೆ ಮತ್ತು ನ್ಯಾಯವನ್ನು ಪಾಲಿಸಬೇಕು, ನೆರೆಹೊರೆಯವರೊಂದಿಗೆ ಒಳ್ಳೆಯ ಸಂಬಂಧ ಹೊಂದುವುದು ಇಸ್ಲಾಂನಲ್ಲಿ ಮಹತ್ವದ್ದೆಂದು ಅವರು ಹೇಳಿದರು. ಎಲ್ಲಾ ಮನುಷ್ಯರೂ ದೇವರ ಮುಂದೆ ಸಮಾನರು ಎಂಬ ಸಂದೇಶವನ್ನು ಅವರು ಬೋಧಿಸಿದರು ಎಂದು ಹೇಳಿದರು.

ಹಿರಿಯ ಸಾಹಿತಿ ಸಿ.ಎಚ್.ನಾರಿನಾಳರವರು ಮಾತನಾಡಿ, ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ ಕೂಡಲ-ಸಂಗಮದೇವಾ, ನಿಮ್ಮ ಮನೆಯ ಮಗನೆಂದೆನಿಸಯ್ಯಾ, ಎಂದು ಬಸವಣ್ಣನವರು 12ನೇ ಶತಮಾನದಲ್ಲಿಯೇ ಸಮಾನತೆಯ ಸಂದೇಶವನ್ನು ತಮ್ಮ ವಚನಗಳಲ್ಲಿ ಸಾರಿದ್ದರೆ. ಇಂತಹ ಸರ್ವಧರ್ಮದ ಸಹೋದರತ್ವದ ಸೌಹಾರ್ದತೆಯ ಕಾರ್ಯಕ್ರಮಗಳು ಸದಾ ನಡಿತಾ ಇರಲಿ ಅದಕ್ಕೆ ನಮ್ಮ ಬೆಂಬಲ ಸದಾ ಇರುತ್ತೆ. ಈ ಹಿಂದೆ ಭಾವೈಕ್ಯನಿಧಿ ಎಂದು ಹೆಸರುವಾಸಿಯಾಗಿದ್ದ ಎಂ.ಎಸ್. ಅನ್ಸಾರಿಯವರು ಸತತ 11 ವರ್ಷಗಳ ಕಾಲ ನಗರದಲ್ಲಿ ಈದ್ ಮಿಲಾಫ್ ಕಾರ್ಯಕ್ರಮವನ್ನು ಆಯೋಜಿಸಿ ಸರ್ವ ಜನಾಂಗದಲ್ಲಿಯೂ ಸೌಹಾರ್ದತೆಯ ವೃದ್ಧಿಸುವ ಮಹತ್ಕಾರ್ಯವನ್ನು ಮಾಡಿದ್ದಾರೆ. ಅದನ್ನು ಮುಂದುವರೆಸುವ ಕೆಲಸ ನಮ್ಮೆಲ್ಲರಿಂದಲೂ ಆಗಬೇಕಿದೆ ಎಂದರು.

ಈ ಸಂದರ್ಭದಲ್ಲಿ ಉಮಾ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಶಾಹಿನ್ ಕೌಸರ್, ವಕೀಲರ ಸಂಘದ ಅಧ್ಯಕ್ಷ ಶರಣಪ್ಪ ನಾಯಕ, ಬಂಜಾರ ಸಮಾಜ ಅಧ್ಯಕ್ಷ ಲಕ್ಷ್ಮಣ್ಣ ನಾಯಕ್, ಸುರೇಶ್ ಸಿಂಗನಾಳ್, ದಿಲೀಪ್ ಕುಮಾರ್, ಕೆ ಬಸಮಾಜ ರಾಷ್ಟ್ರೀಯ ಬಸವದಳ, ಡಾ. ಅಮರೇಶ್ ಅರಳಿ, ಡಾ.ಸುನಿಲ್ ಅರಳಿ, ಡಾ.ಜಿ ಎಂ ವಿಜಯಲಕ್ಷ್ಮಿ, ಡಾ. ಮುಲ್ತಾಜ್ ಬೇಗಂ, ಶೇಕ್ ಆಫೀಜುಲ್ಲಾ ಶಂಶುಲ್ಲುದಾ ಅನ್ಸಾರಿ, ಜನಾಬ್ ಹುಸೇನ್ ಸಾಬ್ ತುಂಗಭದ್ರಾ, ಜನಾಬ್ ಮುನೀರ್ ಸಾಬ್, ಜಮಾತೆ ಇಸ್ಲಾಮಿ ಮಾಜಿ ಜಿಲ್ಲಾಧ್ಯಕ್ಷರಾದಂತಹ ದಿಲಾವರ್‌ಬರ್ ಎನ್, ಅಬ್ದುಲ್ ಖುದ್ದೂಸ್, ಸಾಲೇಹ ಬೇಗಂ ಹಾಗೂ ಜಮಾತಿನ ಕಾರ್ಯಕರ್ತರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News