×
Ad

ಕನಕಗಿರಿ | ವಿದ್ಯುತ್ ತಂತಿ ತಗುಲಿ ಗುಡಿಸಲು ಭಸ್ಮ

Update: 2024-11-12 21:13 IST

ಕೊಪ್ಪಳ : ವಿದ್ಯುತ್ ತಂತಿ ತಗುಲಿ ಗುಡಿಸಲು ಭಸ್ಮವಾಗಿರುವ ಘಟನೆ ಜಿಲ್ಲೆಯ ಕನಕಗಿರಿ ಸಮೀಪದ ಜೀರಾಳ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಅಂಜಪ್ಪ ಎಂಬವರ ಗುಡಿಸಲು ಬೆಂಕಿಯಿಂದ ಭಸ್ಮವಾಗಿದೆ. ಗುಡಿಸಲಿನ ಮೇಲೆ ಇರುವ ವಿದ್ಯುತ್ ಸರ್ವಿಸ್ ತಂತಿ ತಗುಲಿ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಬೆಂಕಿ ಹೊತ್ತಿಕೊಂಡಿದ್ದರಿಂದ ಗುಡಿಸಲಿನಲ್ಲಿದ್ದ ಅಕ್ಕಿ, ಜೋಳ, ಇತರೆ ಧವಸ ಧಾನ್ಯ, ಬಟ್ಟೆ ಬರೆ, ಮನೆ ಬಳಕೆಯ ಸಾಮಾಗ್ರಿಗಳು ಸುಟ್ಟು ಕರಕಲಾಗಿವೆ. ಇದೇ ಸಮಯದಲ್ಲಿ ಸಿಲಿಂಡರ್ ಸ್ಪೋಟ ಆಗಿದೆ ಎಂದು ಸ್ಥಳೀಯರು ತಿಳಿಸಿದ್ದು, ಯಾವುದೇ ಪ್ರಾಣ ಹಾನಿ ಆಗಿಲ್ಲ ಎಂದು ತಿಳಿದು ಬಂದಿದೆ.

ಗ್ರಾಮ ಲೆಕ್ಕಾಧಿಕಾರಿ ಮೆಹಬೂಬಸಾಬ ಅವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News