ಕನಕಗಿರಿ | ಅಪಘಾತ: ಓರ್ವ ವ್ಯಕ್ತಿ ಮೃತ್ಯು
ಕನಕಗಿರಿ : ಕುರಿಗಳಿಗೆ ಔಷಧಿ ತರಲು ಮುಸಲಾಪುರ ಗ್ರಾಮಕ್ಕೆ ತೆರಳಿ ವಾಪಸು ಬರುವಾಗ ದ್ವಿಚಕ್ರ ವಾಹನಕ್ಕೆ ಮತ್ತೊಂದು ದ್ವಿಚಕ್ರ ವಾಹನ ಸವಾರ ಢಿಕ್ಕಿ ಹೊಡೆದ ಪರಿಣಾಮ ಶರಣಪ್ಪ ಹನುಮಪ್ಪ ಸೂಜಿ(29) ಎಂಬವರು ಮೃತ ಪಟ್ಟ ಘಟನೆ ಸೋಮವಾರ ರಾತ್ರಿ ನಡೆದಿರುವುದು ವರದಿಯಾಗಿದೆ.
ಕುರಿ ಔಷಧಿ ತೆಗೆದುಕೊಂಡು ಮುಸಲಾಪುರ-ಪರಾಪುರ ರಸ್ತೆಯಲ್ಲಿ ಮೃತ ಶರಣಪ್ಪ ಸೂಜಿ ಮತ್ತವರ ಗೆಳೆಯ ಹನುಮೇಶ ಬರುವ ಸಮಯದಲ್ಲಿ ಗಂಗಾವತಿ ತಾಲೂಕಿನ ಬಾಪಿರೆಡ್ಡಿ ಕ್ಯಾಂಪ್ ನಿವಾಸಿ ರಾಘವೇಂದ್ರ ನಾಮಲ ತನ್ನ ದ್ವಿಚಕ್ರ ವಾಹನವನ್ನು ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಶರಣಪ್ಪನ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಶರಣಪ್ಪ ಹಾಗೂ ಹನುಮೇಶ ತೀವ್ರ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಶರಣಪ್ಪ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ತೀವ್ರ ಗಾಯಗೊಂಡ ಹನುಮೇಶ ಅವರನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಮೃತರ ತಾಯಿ ನೀಡಿದ ದೂರಿನನ್ವಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.