×
Ad

ಕನಕಗಿರಿ | ನಾಯಕತ್ವ ಬೆಳವಣಿಗೆಗೆ ಎನ್‌ಎಸ್‌ಎಸ್ ಸಹಕಾರಿ : ರಮೇಶ‌ ನಾಯಕ

Update: 2025-09-24 18:54 IST

ಕನಕಗಿರಿ: ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿ ದೆಸೆಯಿಂದಲೆ ನಾಯಕತ್ವ ಗುಣಗಳನ್ನು ಬೆಳಸುತ್ತದೆ ಎಂದು ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ರಮೇಶ‌ ನಾಯಕ ತಿಳಿಸಿದರು.

ಸಮೀಪದ ಹನುಮನಾಳ ಗ್ರಾಮದಲ್ಲಿ ಮಂಗಳವಾರ ರಾತ್ರಿ ಆಯೋಜಿಸಿದ್ದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಅವರು ಮಾತನಾಡಿದರು.

ಗ್ರಾಮದ ಸ್ವಚ್ಛತೆಗೆ ಪ್ರತಿಯೊಬ್ಬರು ಗಮನ ನೀಡಬೇಕು, ಜನಪ್ರತಿನಿಧಿಗಳಿಂದ ವೈಯಕ್ತಿಕ ಸೌಲಭ್ಯ ಕೇಳುವುದಕ್ಕಿಂತ ಗ್ರಾಮದ ಅಭಿವೃದ್ಧಿಗೆ‌ ಪೂರಕವಾದ ಸೌಕರ್ಯಗಳನ್ನು ಪಡೆಯಬೇಕೆಂದು ತಿಳಿಸಿದರು.

ಮುಖಂಡ ಶರತ್ ನಾಯಕ ಅವರು ಹನುಮನಾಳ ಗ್ರಾಮದ ಐತಿಹಾಸಿಕ ಹಿನ್ನೆಲೆ ಕುರಿತು ತಿಳಿಸಿದರು.

ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಗದೀಶ ಗದ್ದಿ, ಪ್ರಭಾರ ಪ್ರಾಂಶುಪಾಲ ಅಮರೇಶ ದೇವರಾಳ, ಎನ್ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಶಿವಪುತ್ರಪ್ಪ ಗಳಪೂಜಿ, ಇತರರು ಮಾತನಾಡಿದರು.‌

ಗ್ರಾಮ ಪಂಚಾಯತ್‌ ಅಧ್ಯಕ್ಷೆ ಶರಣಮ್ಮ‌ ಕೆಲ್ಲೂರು ಅವರು ಅಧ್ಯಕ್ಷತೆ ವಹಿಸಿದ್ದರು.

ಗ್ರಾಮ ಪಂಚಾಯತ್‌ ಸದಸ್ಯ ಅಮರೇಶಪ್ಪ,ಎಸ್ ಡಿಎಂಸಿ ಅಧ್ಯಕ್ಷ ಯಮನೂರಪ್ಪ ಮ್ಯಾದನೇರಿ, ಉಡುಚಪ್ಪ, ಲಕ್ಷ್ಮಣ, ಮಾರುತಿ, ಮೂಕಪ್ಪ, ಕರಿಯಪ್ಪ ನಾಯಕ, ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News