ಕನಕಗಿರಿ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಿದ ಕೋಲಕಾರ
Update: 2025-07-30 23:33 IST
ಕನಕಗಿರಿ : ಬಂಕಾಪುರ ಗ್ರಾಮದಲ್ಲಿ ಕನಕಗಿರಿ ಪಾಳೇಗಾರ ಇಮ್ಮಡಿ ಉಡುಚಪ್ಪನಾಯಕನ ಕಾಲದ ಎರಡು ಶಾಸನಗಳು ಪತ್ತೆಯಾಗಿವೆ ಎಂದು ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್ ತಿಳಿಸಿದ್ದಾರೆ.
ಬಂಕಾಪುರ ಗ್ರಾಮದ ಉತ್ತರಕ್ಕೆ ಒಂದು ಶಾಸನ ಮತ್ತು ಆಗ್ನೇಯಕ್ಕೆ ಎರಡು ಕಿ.ಮೀ. ಅಂತರದಲ್ಲಿ ಹುಟ್ಟು ಬಂಡೆಯ ಮೇಲೆ ಬರೆದ ಮತ್ತೊಂದು ಶಾಸನಗಳಿವೆ. ಮೊದಲ ಶಾಸನ 24 ಸಾಲುಗಳಲ್ಲಿ ಎರಡನೇ ಶಾಸನ ಆರು ಸಾಲುಗಳಲ್ಲಿ ಇದ್ದು, 17ನೇ ಶತಮಾನದ ಕನ್ನಡ ಲಿಪಿ ಮತ್ತು ಭಾಷೆಯಲ್ಲಿವೆ. ಮೊದಲ ಶಾಸನ ಚಾರಿತ್ರಿಕವಾಗಿ ಮಹತ್ವದ್ದಾಗಿದ್ದು, ಕನಕಗಿರಿಯ ಅರಸರ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲುತ್ತದೆ.
ಈ ಶಾಸನಗಳ ಕುರಿತಾಗಿ ಹೆಚ್ಚಿನ ಅಧ್ಯಯನ ಕೈಗೊಳ್ಳಲಾಗುವುದೆಂದು ಮತ್ತು ಶಾಸನ ಶೋಧನೆಯಲ್ಲಿ ಕನಕಗಿರಿಯ ದುರ್ಗಾದಾಸ್ ಯಾದವ್, ಬಂಕಾಪುರದ ಸೋಮನಾಥ, ಗಂಗಾವತಿಯ ಪ್ರೊ.ಬಸವರಾಜ್ ಅಯೋಧ್ಯ , ಡಾ.ಸುರೇಶ್ ಗೌಡ ಮತ್ತು ಹರನಾಯಕ ನೆರವಾಗಿದ್ದಾರೆಂದು ಡಾ.ಕೋಲ್ಕಾರ್ ತಿಳಿಸಿದ್ದಾರೆ.