×
Ad

ಧರ್ಮಸ್ಥಳದ ವಿರುದ್ಧ ವಿನಾಕಾರಣ ಆಪಾದನೆ ಮಾಡಿದರೆ ಸಹಿಸುವುದಿಲ್ಲ: ಬಸವರಾಜ ಕ್ಯಾವಟರ್

Update: 2025-08-13 19:53 IST

ಬಸವರಾಜ ಕ್ಯಾವಟರ್

ಕೊಪ್ಪಳ: ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ವಿರುದ್ಧ ವಿನಾಕಾರಣ ಆಪಾದನೆ ಮಾಡಿದರೆ ನಾವು ಇನ್ನು ಮುಂದೆ ಸಹಿಸುವುದಿಲ್ಲ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ವೈದ್ಯ ಬಸವರಾಜ ಕ್ಯಾವಟರ್ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಪ್ರಗತಿಪರರ ಸೋಗಿನಲ್ಲಿರುವವರು ವಿವಾದ ಸೃಷ್ಟಿ ಮಾಡಿ, ಶ್ರೀ ಧರ್ಮಸ್ಥಳ ಸಂಸ್ಥೆಯ ಹೆಸರನ್ನು ಹಾಳು ಮಾಡಲು ಮುಂದಾಗಿರುವುದು ನಾಚಿಕೇಡಿತನದ ಸಂಗತಿಯಾಗಿದೆ.  ಅನಾಮಿಕ ವ್ಯಕ್ತಿಯೊಬ್ಬ ಮೃತದೇಹಗಳನ್ನು ಹೂಳಲಾಗಿದೆ ಎಂಬ ಹೇಳಿಕೆ ನೀಡಿ 15 ದಿನ ಕಳೆದರೂ ಈವರೆಗೂ ಒಂದೇ ಒಂದು ಹೆಣ ಎಸ್‌ಐಟಿ ತಂಡಕ್ಕೆ ಸಿಕ್ಕಿಲ್ಲ. ಇನ್ನೂ 13ದಿನ ಅಲ್ಲ, ವರ್ಷ ಅಗೆದರೂ ಯಾವುದೇ ಹೆಣ ಸಿಗುವುದಿಲ್ಲ. ರಾಜ್ಯ ಸರಕಾರವು ಈ ವಿಚಾರದಲ್ಲಿ ಸಮರ್ಪಕವಾಗಿ ಪರಿಶೀಲಿಸದೆ ಎಸ್‌ಐಟಿ ರಚನೆಯಂತಹ ಆತುರದ ನಿರ್ಧಾರ ತೆಗೆದುಕೊಳ್ಳಬಾರದಿತ್ತು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News