×
Ad

‘ಉತ್ತರ ಕರ್ನಾಟಕ’ ಈ ಸರಕಾರದ ನಕ್ಷೆಯಲ್ಲಿ ಇದೆಯೋ ಇಲ್ಲವೋ? : ಬಸವರಾಜ ಬೊಮ್ಮಾಯಿ

Update: 2024-12-22 18:42 IST

ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ : ಬೆಳಗಾವಿ ಅಧಿವೇಶನವನ್ನು ಕಾಟಾಚಾರಕ್ಕೆ ನಡೆಸಿದ್ದು, ಉತ್ತರ ಕರ್ನಾಟಕ ಈ ಸರಕಾರದ ನಕ್ಷೆಯಲ್ಲಿ ಇದೆಯೋ ಇಲ್ಲವೋ ಎನ್ನುವ ಅನುಮಾನ ಮೂಡಿದೆ. ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಪಕ್ಷಾತೀತ ಹೋರಾಟಕ್ಕೆ ಸನ್ನದ್ಧರಾಗಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಯೋಜನೆಗಳು ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಚರ್ಚೆಯಾಗಿ ಅದಕ್ಕೆ ಪರಿಹಾರ ಸಿಗುತ್ತದೆ ಎಂದು ಜನರು ನಿರೀಕ್ಷೆ ಮಾಡಿದ್ದರು. ಕಾಟಾಚಾರಕ್ಕೆ ಈ ಸರಕಾರ ಅಧಿವೇಶನ ನಡೆಸಿತು ಎಂದು ದೂರಿದರು.

ಪಂಚಮಸಾಲಿ ಸಮುದಾಯದ ಮೇಲೆ ಲಾಠಿ ಬೀಸುವುದರಿಂದ ಹಿಡಿದು, ಸದನದಲ್ಲಿ ನಡೆದ ಘಟನೆಗೆ ಪೊಲೀಸರು ತಮ್ಮ ವ್ಯಾಪ್ತಿ ಮೀರಿ ಸಿ.ಟಿ.ರವಿ ಬಂಧನ ಮಾಡಿ, ಅವರಿಗೆ ಹಿಂಸೆ ನೀಡಿ ರಾತಿಯೆಲ್ಲ ಸುತ್ತಾಡಿಸಿ. ಪೊಲೀಸರ ಲಾಠಿಯಿಂದ ಹಿಡಿದು ಬಂಧನದ ವರೆಗೆ ಅಧಿವೇಶನ ನಡೆದಿದೆ. ಒಂದು ರೀತಿ ಪೊಲೀಸ್ ರಾಜ್ಯವಾಗಿದೆ ಎಂದು ಅವರು ಟೀಕಿಸಿದರು.

ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಎಲ್ಲ ಜನಪತಿನಿಧಿಗಳು ಸೇರಿ ಪಕ್ಷಾತೀತವಾಗಿ ಪತ್ಯೇಕ ಸಭೆ ಮಾಡಿ, ಈಗ ಆಗಬೇಕಿರವ ಯೋಜನೆಗಳು, ಸಮಸ್ಯೆಗಳ ಕುರಿತು ಚರ್ಚಿಸಿ ಸರಕಾರಕ್ಕೆ ಒಂದು ಆಗ್ರಹ ಪೂರಕವಾಗಿ ಗಮನ ಸೆಳೆದು ಪಕ್ಷಾತೀತವಾಗಿ ಹೋರಾಟ ಮಾಡಲು ಸನ್ನದ್ದರಾಗಬೇಕು ಎಂದು ಅವರು ತಿಳಿಸಿದರು.

ಆರ್ಥಿಕ ಸ್ಥಿತಿ ಗಂಭೀರ: ಸರಕಾರದ ಹಣಕಾಸಿನ ಸ್ಥಿತಿ ಗಂಭೀರವಾಗಿದೆ. ಬಜೆಟ್‍ನಲ್ಲಿ ಸುಮಾರು 15ಸಾವಿರ ಕೋಟಿ ರೂ.ಹೆಚ್ಚಿನ ತೆರಿಗೆ ಹಾಕಿದರು. ಈಗ ಸುಮಾರು 8ರಿಂದ 10 ರೀತಿಯ ತೆರಿಗೆ ಹಾಕಿದ್ದಾರೆ. ಭೂಮಿ ಮೇಲೆ, ವಾಹನದ ಮೇಲೆ ಹೆಚ್ಚಿನ ತೆರಿಗೆ ಹಾಕಿದ್ದಾರೆ. ಸುಮಾರು 40 ಸಾವಿರ ಕೋಟಿ ರೂ.ಹೆಚ್ಚಿನ ತೆರಿಗೆ ಹಾಕಿದ್ದಾರೆ. ಈಗ ಪಶ್ಚಿಮಘಟ್ಟದ ನೀರಿಗೂ ತೆರಿಗೆ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ. ಗಾಳಿಯೊಂದನ್ನು ಬಿಟ್ಟು ಎಲ್ಲದಕ್ಕೂ ತೆರಿಗೆ ಹಾಕಿದ್ದಾರೆ ಎಂದು ದೂರಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News