×
Ad

ಮಂಡ್ಯ | ಬಿಸಿಲ ಬೇಗೆಯಿಂದ ಬಸವಳಿದ್ದ ಜನತೆಗೆ ತಂಪೆರೆದ ಮಳೆ

Update: 2024-04-18 20:04 IST

ಮಂಡ್ಯ: ಬಿಸಿಲ ಬೇಗೆಯಿಂದ ಬಸವಳಿದಿದ್ದ ಜಿಲ್ಲೆಯ ಜನತೆಗೆ ಗುರುವಾರ ಸುಮಾರು ಅರ್ಧಗಂಟೆ ಸುರಿದ ಮಳೆ ತಂಪೆರೆಯಿತು. ಜತೆಗೆ, ಬಿರುಗಾಳಿಯಿಂದ ಮರಗಳು ಉರುಳಿ ವಾಹನ ಸಂಚಾರಕ್ಕೆ ವ್ಯತ್ಯಯವಾಯಿತು.

ಸಂಜೆ ಆರು ಗಂಟೆ ವೇಳೆಗೆ ಗುಡುಗು, ಮಿಂಚು, ಬಿರುಗಾಳಿ ಸಮೇತ ಅರ್ಧಗಂಟೆ ಮಳೆ ನಗರದಲ್ಲಿ ಸುರಿಯಿತು. ಇದೇ ರೀತಿ ಜಿಲ್ಲೆಯ ಹಲವು ಕಡೆ ಮಳೆಯಾದ ಬಗ್ಗೆ ವರದಿಯಾಗಿದೆ.

ಬಿರುಗಾಳಿಯಿಂದ ಬೆಂಗಳೂರು ಮೈಸೂರು ಹೆದ್ದಾರಿ ಮತ್ತು ವಿವಿಧ ಬಡಾವಣೆಗಳಲ್ಲಿ ಮರಗಳು ಉರುಳಿಬಿದ್ದ ಪರಿಣಾಮ ವಾಹನ ಸಂಚಾರ ವ್ಯತ್ಯಯವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News