×
Ad

ಶ್ರೀರಂಗಪಟ್ಟಣ | ಕಾಲುವೆಯಲ್ಲಿ ಮುಳುಗಿ ಬಾಲಕ ಮೃತ್ಯು

Update: 2025-10-10 18:13 IST

ಸಾಂದರ್ಭಿಕ ಚಿತ್ರ

ಮಂಡ್ಯ, ಅ.10 : ಗೆಳೆಯರೊಂದಿಗೆ ಕಾವೇರಿ ನದಿಯ ದೊಡ್ಡ ಕಾಲುವೆಯಲ್ಲಿ ಈಜುತ್ತಿದ್ದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶ್ರೀರಂಗಪಟ್ಟಣ ತಾಲೂಕು ಬಳಿ ಶುಕ್ರವಾರ ನಡೆದಿರುವುದು ವರದಿಯಾಗಿದೆ.

ಮೈಸೂರಿನ ಬಸವನಗುಡಿ ಹೆಬ್ಬಾಳ ನಿವಾಸಿ ಚಂದ್ರಾ ಅವರ ಪುತ್ರ ಆಕಾಶ್ (17) ಸಾವನ್ನಪ್ಪಿದ ಬಾಲಕ ಎಂದು ತಿಳಿದು ಬಂದಿದೆ.

ಅಗ್ನಿಶಾಮಕ ಇಲಾಖೆಯವರು ಕಾರ್ಯಾಚರಣೆ ನಡೆಸಿ ಮೃತ ದೇಹವನ್ನು ಹೊರ ತೆಗೆದಿದ್ದಾರೆ.  ಈ ಸಂಬಂಧ ಕೆ ಆರ್ ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News