×
Ad

ಶ್ರೀರಂಗಪಟ್ಟಣ | ನೇಣುಬಿಗಿದ ಸ್ಥಿತಿಯಲ್ಲಿ ಅಪರಿಚಿತ ಪುರುಷ, ಮಹಿಳೆ ಮೃತದೇಹ ಪತ್ತೆ

Update: 2025-06-13 20:25 IST

ಸಾಂದರ್ಭಿಕ ಚಿತ್ರ

ಶ್ರೀರಂಗಪಟ್ಟಣ : ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ಪುರುಷ ಹಾಗೂ ಮಹಿಳೆಯ ಕೊಳೆತ ಮೃತದೇಹವು ತಾಲೂಕಿನ ಕೆಆರ್‌ಎಸ್-ಬೆಳಗೊಳ ರಸ್ತೆಯ ಬೆಳಗೊಳ ಗ್ರಾಮದ ಈದ್ಗಾ ಮೈದಾನದಲ್ಲಿ ಪತ್ತೆಯಾಗಿರುವುದು ವರದಿಯಾಗಿದೆ.

ಗ್ರಾಮದ ರಾಚಯ್ಯ ಎಂಬುವರ ಜಮೀನಿನಲ್ಲಿನ ಪ್ರತ್ಯೇಕ ಮರಗಳಲ್ಲಿ ಪ್ಲಾಸ್ಟಿಕ್ ದಾರದಿಂದ ನೇಣುಬಿಗಿದ ರೀತಿಯಲ್ಲಿ ಈ ಮೃತದೇಹ ಪತ್ತೆಯಾಗಿದ್ದು,ಮೃತದೇಹ ಸಂಪೂರ್ಣವಾಗಿ ಕೊಳೆತು ಹೋಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಡಿಎಸ್ಪಿ ಪಿ.ಶಾಂತಮಲ್ಲಪ್ಪ, ಕೆಆರ್‌ಎಸ್ ಠಾಣೆಯ ಪಿಎಸ್ಸೈ ರಮೇಶ್ ಕರ್ಕಿಕಟ್ಟೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಮೈಸೂರು ಕೆಆರ್‌ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ನಡೆಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News