×
Ad

ಅಸ್ಸಾಂ ಸಿಎಂ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ

Update: 2024-04-05 21:46 IST

ಹಿಮಂತ ಬಿಸ್ವ ಶರ್ಮಾ (ಫೋಟೋ: PTI )

ಗುವಾಹಟಿ : ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಭೂಪೇನ್‌ಕುಮಾರ ಬೋರಾ ಅವರು ಗುರುವಾರ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ವಿರುದ್ಧ ಸ್ಥಳೀಯ ನ್ಯಾಯಾಲಯದಲ್ಲಿ 10 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಾರೆ. ಶರ್ಮಾರ ವಿವಿಧ ಹೇಳಿಕೆಗಳು ತನ್ನ ಸಾರ್ವಜನಿಕ ವರ್ಚಸ್ಸು ಮತ್ತು ಪಕ್ಷಕ್ಕೆ ಹಾನಿಯನ್ನುಂಟು ಮಾಡಿವೆ ಎಂದು ಅವರು ಆರೋಪಿಸಿದ್ದಾರೆ.

ಶರ್ಮಾರೊಂದಿಗೆ ರಾಜ್ಯದ ಸ್ಥಳೀಯ ಭಾಷೆಯ ಪ್ರಮುಖ ದೈನಿಕ ಮತ್ತು ಅದರ ಸಂಪಾದಕರನ್ನೂ ಮೊಕದ್ದಮೆಯಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ಶರ್ಮಾ ಹಲವಾರು ಸಂದರ್ಭಗಳಲ್ಲಿ ರಾಜ್ಯ ಕಾಂಗ್ರೆಸ್ ಮುಖ್ಯಸ್ಥರು ಶೀಘ್ರವೇ ಪಕ್ಷವನ್ನು ತೊರೆಯಲಿದ್ದಾರೆ ಎಂದು ಹೇಳಿದ್ದು, ಇದು ತನ್ನ ವರ್ಚಸ್ಸಿಗೆ ಮತ್ತು ಪಕ್ಷಕ್ಕೆ ಧಕ್ಕೆಯನ್ನುಂಟು ಮಾಡಿದೆ ಎಂದು ಬೋರಾ ಹೇಳಿದ್ದಾರೆ.

ಬೋರಾ ಮುಂದಿನ ವರ್ಷದ ಆರಂಭದಲ್ಲಿ ಬಿಜೆಪಿಯನ್ನು ಸೇರಲಿದ್ದಾರೆ ಎಂದು ಶರ್ಮಾ ಹೇಳಕೊಳ್ಳುತ್ತಿದ್ದು, ಇದನ್ನು ಬೋರಾ ನಿರಾಕರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News