×
Ad

ದಿಲ್ಲಿಯ ಸೆಲೂನ್ ನಲ್ಲಿ ಗುಂಡಿಕ್ಕಿ ಇಬ್ಬರ ಹತ್ಯೆ ; ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಕೃತ್ಯ

Update: 2024-02-09 21:31 IST

Photo: NDTV 

ಹೊಸದಿಲ್ಲಿ : ನೈಋತ್ಯ ದೆಹಲಿಯ ನಜಾಫ್ಗಢ್ನಲ್ಲಿರುವ ಸೆಲೂನ್ನಲ್ಲಿ ಇಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ವರದಿಯಾಗಿದೆ ಎಂದು ndtv ವರದಿ ಮಾಡಿದೆ.

ಕ್ಷೌರಕ್ಕಾಗಿ ಬಂದಿದ್ದ ವ್ಯಕ್ತಿಯೊಬ್ಬರು, ಮೊಣಕಾಲುಗಳ ಮೇಲೆ ಕೈಗಳನ್ನು ಮಡಚಿ “ಇಲ್ಲ, ದಯವಿಟ್ಟು, ಬೇಡ..” ಎಂದು ಬೇಡಿಕೊಂಡರೂ ಕನಿಕರ ತೋರದ ಹಳದಿ ಜಾಕೆಟ್ನಲ್ಲಿದ್ದ ದುಷ್ಕರ್ಮಿ ಝೀರೋ ಪಾಯಿಂಟ್ ರೇಂಜ್ನಿಂದ ಅವರ ತಲೆಗೆ ಹಲವು ಬಾರಿ ಗುಂಡು ಹಾರಿಸಿದ್ದು, ಸಿಸಿಟಿವಿ ವಿಡಿಯೋದಲ್ಲಿ ಸೆರೆಯಾಗಿದೆ. ದಾಳಿ ಬಳಿಕ ಇಬ್ಬರು ದಾಳಿಕೋರರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಇತರ ಗ್ರಾಹಕರು ಮತ್ತು ಸಿಬ್ಬಂದಿಯ ಮುಂದೆಯೇ ಘಟನೆ ನಡೆದಿದೆ. ಗುಂಡೇಟಿನಿಂದ ಮೃತಪಟ್ಟವರನ್ನು 30 ವರ್ಷದ ಸೋನು ಮತ್ತು ಆಶಿಶ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣವು ವೈಯಕ್ತಿಕ ದ್ವೇಷದಿಂದ ಕೂಡಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಗ್ಯಾಂಗ್ ವಾರ್ ನ ಸಾಧ್ಯತೆಯೂ ಇದೆ ಎನ್ನಲಾಗಿದೆ. ಆರೋಪಿಗಳ ಪತ್ತೆಗೆ ದಿಲ್ಲಿ ಪೊಲೀಸರು ಮೂರು ತಂಡಗಳನ್ನು ರಚಿಸಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News