ಕೇರಳ: ದೇಗುಲದ ಉತ್ಸವದಲ್ಲಿ ಹುಚ್ಚೆದ್ದು ಓಡಿದ ಆನೆ; ಮೂವರು ಮೃತ್ಯು, 36 ಮಂದಿಗೆ ಗಾಯ
PC - onmanorama
ಕೋಝಿಕ್ಕೋಡ್: ಕೋಝಿಕ್ಕೋಡ್ ಜಿಲ್ಲೆಯ ಕೊಯಿಲಾಂಡಿಯಲ್ಲಿ ಗುರುವಾರ ದೇವಾಲಯವೊಂದರ ಉತ್ಸವದಲ್ಲಿ ಪಾಲ್ಗೊಂಡ ಎರಡು ಆನೆಗಳು ಹುಚ್ಚೆದ್ದು ಓಡಿದ ಪರಿಣಾಮ ಮೂವರು ಮೃತಪಟ್ಟಿದ್ದಾರೆ ಹಾಗೂ 36 ಮಂದಿ ಗಾಯಗೊಂಡಿದ್ದಾರೆ.
ಘಟನೆಯಲ್ಲಿ ಮೃತಪಟ್ಟವರನ್ನು ಅಮ್ಮುಕುಟ್ಟಿ (70), ಲೀಲಾ (65) ಹಾಗೂ ರಾಜನ್ (70) ಎಂದು ಗುರುತಿಸಲಾಗಿದೆ.
ಈ ಘಟನೆ ಕೊಯಿಲಾಂಡಿಯ ಕುರುವಂಗಾಡ್ನಲ್ಲಿರುವ ಮಾನಕ್ಕುಲಾಂಗರಾ ಭಗವತಿ ದೇವಾಲಯದಲ್ಲಿ ಸಂಜೆ 5.30ಕ್ಕೆ ಸಂಭವಿಸಿದೆ. ಧಾರ್ಮಿಕ ಮೆರವಣಿಗೆಯ ಸಂದರ್ಭ ಸಿಡಿಸಿದ ಪಟಾಕಿ ಸದ್ದು ಕೇಳಿ ಆನೆಗಳು ಹುಚ್ಚೆದ್ದು ಓಡಿದವು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡವರನ್ನು ಕೋಝಿಕ್ಕೋಡ್ ಸರಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇವರಲ್ಲಿ 10 ವರ್ಷದ ಬಾಲಕಿ ಸೇರಿದಂತೆ 7 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಅವರು ಹೇಳಿದ್ದಾರೆ.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ
► https://whatsapp.com/channel/0029VaA8ju86LwHn9OQpEq28