×
Ad

ಛತ್ತೀಸ್‌ಗಢ | ಭದ್ರತಾ ಪಡೆಗಳಿಂದ 30 ಶಂಕಿತ ನಕ್ಸಲರ ಹತ್ಯೆ; ಓರ್ವ ಮೀಸಲು ಪಡೆ ಸಿಬ್ಬಂದಿ ಹುತಾತ್ಮ

Update: 2025-05-21 12:24 IST

ರಾಯ್ಪುರ: ಛತ್ತೀಸ್‌ಗಢದ ನಾರಾಯಣಪುರದಲ್ಲಿ ಭದ್ರತಾ ಪಡೆಗಳು ಅವಳಿ ಎನ್‌ಕೌಂಟರ್‌ ನಡೆಸಿ  30 ಶಂಕಿತ ನಕ್ಸಲರನ್ನು ಹತ್ಯೆ ಮಾಡಿದೆ. ಈ ವೇಳೆ ನಕ್ಸಲರ ದಾಳಿಗೆ ಓರ್ವ ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು The Hindu ವರದಿ ಮಾಡಿದೆ.

ಎನ್ಕೌಂಟರ್‌ನಲ್ಲಿ ಹತರಾದವರಲ್ಲಿ ಉನ್ನತ ನಕ್ಸಲ್ ನಾಯಕನೋರ್ವ ಸೇರಿದ್ದಾನೆ ಎಂದು ಹೇಳಲಾಗಿದೆ. ಕಾರ್ಯಾಚರಣೆ ವೇಳೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು ವಶಪಡಿಸಿಕೊಳ್ಳಲಾಗಿದೆ.

ನಾರಾಯಣಪುರ ಜಿಲ್ಲೆಯ ಅಬುಜ್ಮದ್ ಅರಣ್ಯ ಪ್ರದೇಶದಲ್ಲಿ ನಕ್ಸಲರು ಮತ್ತು ಜಿಲ್ಲಾ ಮೀಸಲು ಪಡೆ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬುಧವಾರ ಬೆಳಿಗ್ಗೆ ಅಬುಜ್ಮದ್ ಅರಣ್ಯ ಪ್ರದೇಶದಲ್ಲಿ ಪ್ರಾರಂಭವಾದ ಈ ಕಾರ್ಯಾಚರಣೆಯಲ್ಲಿ ನಾರಾಯಣಪುರ, ಬಿಜಾಪುರ ಮತ್ತು ದಂತೇವಾಡ ಜಿಲ್ಲಾ ಮೀಸಲು ಪಡೆ ಸಿಬ್ಬಂದಿಗಳು ಭಾಗವಹಿಸಿದ್ದರು ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News