ಹರ್ಯಾಣ: ರೋಹ್ಟಕ್‌ನಲ್ಲಿ 3.3 ತೀವ್ರತೆಯ ಭೂಕಂಪನ
Update: 2025-07-17 12:25 IST
ಸಾಂದರ್ಭಿಕ ಚಿತ್ರ (PTI)
ರೋಹ್ಟಕ್: ಗುರುವಾರ ಮುಂಜಾನೆ ಹರ್ಯಾಣದ ರೋಹ್ಟಕ್‌ನಲ್ಲಿ 3.3 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ತಿಳಿಸಿದೆ.
ಭೂಕಂಪದ ಕೇಂದ್ರ ಬಿಂದು ರೋಹ್ಟಕ್ ನಗರದಿಂದ ಪೂರ್ವಕ್ಕೆ 17 ಕಿಲೋಮೀಟರ್ ದೂರದಲ್ಲಿ ಭೂಮಿಯ ಮೇಲ್ಮೈಯಿಂದ 10 ಕಿಲೋಮೀಟರ್ ಆಳದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ತಿಳಿಸಿದೆ.
ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿ ಸಂಭವಿಸಿಲ್ಲ. ಈ ಪ್ರದೇಶದಲ್ಲಿ ಭೂಕಂಪ ಹೆಚ್ಚುತ್ತಿರುವ ಕಾರಣ ಅಧಿಕಾರಿಗಳು ನಿಗಾ ಇಟ್ಟಿದ್ದಾರೆ.
ಕಳೆದ ಎಂಟು ದಿನಗಳಲ್ಲಿ ಹರ್ಯಾಣದಲ್ಲಿ ಸಂಭವಿಸಿದ ನಾಲ್ಕನೇ ಭೂಕಂಪನ ಇದಾಗಿದೆ. ಜುಲೈ 11ರಂದು ಜಜ್ಜರ್ ಜಿಲ್ಲೆಯಲ್ಲಿ 3.7 ತೀವ್ರತೆಯ ಭೂಕಂಪನ ಸಂಭವಿಸಿದೆ. ನಂತರ ಕೆಲವೇ ಗಂಟೆಗಳಲ್ಲಿ ಅದೇ ಪ್ರದೇಶದಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿತ್ತು.