×
Ad

ಟೊಮೆಟೊ ಮಾರಾಟದಿಂದ ಒಂದೇ ತಿಂಗಳಲ್ಲಿ ಕೋಟ್ಯಾಧಿಪತಿಯಾದ ಮಹಾರಾಷ್ಟ್ರದ ರೈತ

ಟೊಮೆಟೊ ಮಾರಾಟ ಮಾಡುವ ಮೂಲಕ ರೈತರು ಲಕ್ಷಾಧಿಪತಿಗಳಾಗುತ್ತಿರುವುದು ಕೇವಲ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಕರ್ನಾಟಕದ ಕೋಲಾರದ ರೈತರ ಕುಟುಂಬವೊಂದು ಈ ವಾರ 2,000 ಬಾಕ್ಸ್ ಟೊಮೆಟೊ ಮಾರಾಟ ಮಾಡಿ 38 ಲಕ್ಷ ರೂ.ಗಳೊಂದಿಗೆ ಮನೆಗೆ ಮರಳಿದೆ.

Update: 2023-07-15 12:04 IST

ಮುಂಬೈ: ದೇಶಾದ್ಯಂತ ಟೊಮೆಟೊ  ಬೆಲೆ ಗಗನಕ್ಕೇರುತ್ತಿರುವ ಮಧ್ಯೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಟೊಮೆಟೊ ಬೆಳೆದ ರೈತರೊಬ್ಬರಿಗೆ ಜಾಕ್ ಪಾಟ್ ಹೊಡೆದಿದೆ. ತುಕಾರಾಂ ಭಾಗೋಜಿ ಗಾಯಕರ್ ಹಾಗೂ ಅವರ ಕುಟುಂಬವು ಒಂದು ತಿಂಗಳಲ್ಲಿ 13,000 ಟೊಮೆಟೊ ಕ್ರೇಟ್ ಗಳನ್ನು ಮಾರಾಟ ಮಾಡುವ ಮೂಲಕ 1.5 ಕೋಟಿ ರೂ.ಗೂ ಹೆಚ್ಚು ಆದಾಯ ಗಳಿಸಿದೆ.

ತುಕಾರಾಂ ಅವರು 18 ಎಕರೆ ಕೃಷಿ ಭೂಮಿ ಹೊಂದಿದ್ದು, 12 ಎಕರೆ ಜಮೀನಿನಲ್ಲಿ ತಮ್ಮ ಮಗ ಈಶ್ವರ್ ಗಾಯಕರ್ ಹಾಗೂ ಸೊಸೆ ಸೊನಾಲಿ ಅವರ ಸಹಾಯದಿಂದ ಟೊಮೆಟೊ ಕೃಷಿ ಮಾಡಿದ್ದಾರೆ.

ನಾವು ಉತ್ತಮ ಗುಣಮಟ್ಟದ ಟೊಮೆಟೊಗಳನ್ನು ಬೆಳೆಯುತ್ತೇವೆ. ರಸಗೊಬ್ಬರಗಳು ಮತ್ತು ಕೀಟನಾಶಕಗಳ ಬಗ್ಗೆ ನಮ್ಮ ಜ್ಞಾನವು ಕೀಟಗಳಿಂದ ನಮ್ಮ ಬೆಳೆ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಕುಟುಂಬದವರು ಹೇಳಿದರು.

ನಾರಾಯಣಗಂಜ್ ನಲ್ಲಿ ಒಂದು ಟೊಮೆಟೊ ಕ್ರೇಟ್ ಮಾರಾಟ ಮಾಡುವ ಮೂಲಕ ರೈತ ದಿನಕ್ಕೆ 2,100 ರೂ. ಗಳಿಸುತ್ತಾನೆ. ಗಾಯಕರ್ ಶುಕ್ರವಾರ ಒಟ್ಟು 900 ಕ್ರೇಟ್ ಮಾರಾಟ ಮಾಡಿದ್ದು, ಒಂದೇ ದಿನದಲ್ಲಿ 18 ಲಕ್ಷ ರೂ. ಗಳಿಸಿದ್ದಾರೆ.

ಕಳೆದ ತಿಂಗಳು, ಅವರು ಗುಣಮಟ್ಟದ ಆಧಾರದ ಮೇಲೆ ಪ್ರತಿ ಕ್ರೇಟ್ಗೆ 1,000 ರಿಂದ 2,400 ರೂ.ವರೆಗೆ ಟೊಮೆಟೊ ಕ್ರೇಟ್ ಗಳನ್ನು ಮಾರಾಟ ಮಾಡಲು ಸಾಧ್ಯವಾಯಿತು. ಪುಣೆ ಜಿಲ್ಲೆಯ ಜುನ್ನಾರ್ ಎಂಬ ನಗರದಲ್ಲಿ ಈಗ ಟೊಮೇಟೊ ಬೆಳೆಯುತ್ತಿರುವ ಹಲವು ರೈತರು ಲಕ್ಷಾಧಿಪತಿಗಳಾಗಿದ್ದಾರೆ.

ಟೊಮೆಟೊ ಮಾರಾಟದ ಮೂಲಕ ಸಮಿತಿಯು ಒಂದು ತಿಂಗಳಲ್ಲಿ 80 ಕೋಟಿ ರೂಪಾಯಿ ವ್ಯವಹಾರ ಮಾಡಿದೆ ಮತ್ತು ಈ ಪ್ರದೇಶದಲ್ಲಿ 100 ಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗವನ್ನೂ ನೀಡಿದೆ.

ಟೊಮೆಟೊ  ಮಾರಾಟ ಮಾಡುವ ಮೂಲಕ ರೈತರು ಲಕ್ಷಾಧಿಪತಿಗಳಾಗುತ್ತಿರುವುದು ಕೇವಲ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಕರ್ನಾಟಕದ ಕೋಲಾರದ ರೈತರ ಕುಟುಂಬವೊಂದು ಈ ವಾರ 2,000 ಬಾಕ್ಸ್ ಟೊಮೆಟೊ ಮಾರಾಟ ಮಾಡಿ 38 ಲಕ್ಷ ರೂ.ಗಳೊಂದಿಗೆ ಮನೆಗೆ ಮರಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News