×
Ad

ಸಶಸ್ತ್ರ ದರೋಡೆಕೋರನನ್ನು ಬರಿಕೈಯಲ್ಲೇ ಹಿಮ್ಮೆಟ್ಟಿಸಿದ ಮಹಿಳೆ; ವಿಡಿಯೋ ವೈರಲ್

Update: 2023-08-14 20:13 IST

ಹೈದರಾಬಾದ್: ತೆಲಂಗಾಣದಲ್ಲಿ ಮಹಿಳೆಯೊಬ್ಬರು ಮುಸುಕುಧಾರಿ ದರೋಡೆಕೋರನ ವಿರುದ್ಧ ಧೈರ್ಯದಿಂದ ಹೋರಾಡಿ‌, ಆತನನ್ನು ಹಿಮ್ಮೆಟ್ಟಿಸಿರುವ ಘಟನೆ ನಡೆದಿದೆ.

ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ವೇಮುಲವಾಡ ಪಟ್ಟಣದಲ್ಲಿ ರವಿವಾರ ಮುಂಜಾನೆ ಈ ಘಟನೆ ನಡೆದಿದ್ದು, ಘಟನೆ ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಹಿಳೆ ಮತ್ತು ಕಳ್ಳನ ನಡುವಿನ ಮುಖಾಮುಖಿಯ ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ.

ಕಬ್ಬಿಣದ ರಾಡ್‌ನಿಂದ ತನ್ನ ಮೇಲೆ ದಾಳಿ ಮಾಡಲು ಸಿದ್ಧವಾಗಿದ್ದ ದರೋಡೆಕೋರನನ್ನು ಮಹಿಳೆ ಧೈರ್ಯದಿಂದ ಎದುರಿಸಿದ್ದಾರೆ.

ಸಂಪೂರ್ಣವಾಗಿ ಮುಖವನ್ನು ಮುಚ್ಚಿದ್ದ ದರೋಡೆಕೋರ ಮಹಿಳೆಯ ಮೇಲೆ ಕಬ್ಬಿಣದ ರಾಡಿನೊಂದಿಗೆ ದಾಳಿ ನಡೆಸಿದ್ದು, ಆತನೊಂದಿಗೆ ವೀರಾವೇಶದಿಂದ ಹೋರಾಡಿದ ಮಹಿಳೆ, ಆತ ಮನೆಯೊಳಗೆ ನುಗ್ಗದಂತೆ ತಡೆದು, ಆತನನ್ನು ಓಡಿಸಿದ್ದಾರೆ.

ಆದರೆ, ಆತ ಮಹಿಳೆಯ 7 ಗ್ರಾಂ ಚಿನ್ನದ ಸರ ಕಿತ್ತುಕೊಂಡಿರುವುದಾಗಿ ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.

ಘಟನೆ ಕುರಿತು ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ದಾಳಿಕೋರರನ್ನು ಗುರುತಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.

40 ವರ್ಷದ ಮಹಿಳೆ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದು, ಕಿರಾಣಿ ಅಂಗಡಿಯನ್ನು ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News