ವಿಧಾನಸಭಾ ಉಪಚುನಾವಣೆ: ಗುಜರಾತ್‌ನ ವಿಸಾವದರ್ ಕ್ಷೇತ್ರದಲ್ಲಿ ಆಪ್‌ಗೆ ಗೆಲುವು, ಕಾಡಿ ಕ್ಷೇತ್ರ ಉಳಿಸಿಕೊಂಡ ಬಿಜೆಪಿ
Update: 2025-06-23 13:56 IST
ಸಾಂದರ್ಭಿಕ ಚಿತ್ರ (PTI)
ಅಹ್ಮದಾಬಾದ್: ಗುಜರಾತ್‌ನ ವಿಸಾವದರ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಆಪ್ ಅಭ್ಯರ್ಥಿ ಇಟಾಲಿಯಾ ಗೋಪಾಲ್ ಗೆಲುವನ್ನು ಸಾಧಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಕಿರಿತ್ ಪಟೇಲ್ ವಿರುದ್ಧ 17,000ಕ್ಕೂ ಅಧಿಕ ಮತಗಳ ಅಂತರದಿಂದ ಇಟಾಲಿಯಾ ಗೋಪಾಲ್ ಗೆಲುವನ್ನು ಸಾಧಿಸಿದ್ದಾರೆ.
ಗುಜರಾತ್‌ನ ಕಾಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಂದ್ರ ಚಾವ್ಡಾ, ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಚಾವ್ಡಾ ವಿರುದ್ಧ 39,000ಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.