×
Ad

Fact Check | ದೆಹಲಿ ಚುನಾವಣೆಯಲ್ಲಿ ಎಎಪಿ ಗೆಲುವು ಸಾಧಿಸುವ ಸಮೀಕ್ಷೆಯನ್ನು ಎಬಿಪಿ ನ್ಯೂಸ್ ಪ್ರಕಟಿಸಿಲ್ಲ

Update: 2025-02-07 15:03 IST

2025 ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಗೆಲುವು ಸಾಧಿಸಿದೆ ಎಂದು ಹೇಳಲು ಎಡಿಟ್ ಮಾಡಲಾದ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್ದ ನಿಂದ ಮಾರ್ಪಡಿಸಲಾಗಿದೆ)

ಹೇಳಿಕೆ ಏನು?

ಎಬಿಪಿ ನ್ಯೂಸ್ ಬುಲೆಟಿನ್ ನ 50 ಸೆಕೆಂಡುಗಳ ವೀಡಿಯೋ ಕ್ಲಿಪ್ ಅನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿದೆ, ಫೆಬ್ರವರಿ 5, 2025 ರಂದು ನಿಗದಿಪಡಿಸಿದ 2025 ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ನ್ಯೂಸ್ ಚಾನೆಲ್‌ನ ಅಭಿಪ್ರಾಯ ಸಮೀಕ್ಷೆಯು ಈಗಿನ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಜಯ ವದಗಲಿದೆ ಎಂದು ಊಹಿಸಿದೆ ಎಂದು ಬಳಕೆದಾರರು ಹೇಳಿಕೊಂಡಿದ್ದಾರೆ.

"ಅತಿದೊಡ್ಡ ಅಭಿಪ್ರಾಯ ಸಮೀಕ್ಷೆ", "ಅರವಿಂದ್ ಕೇಜ್ರಿವಾಲ್ಗೆ ಸತತ ನಾಲ್ಕನೇ ಗೆಲುವು" ಮತ್ತು "ಎಎಪಿ ಸರ್ಕಾರವನ್ನು ರೂಪಿಸುತ್ತದೆ" ಎಂದು ಮಹಿಳಾ ನಿರೂಪಕಿ ಘೋಷಿಸುವುದನ್ನು ವೀಡಿಯೋ ತೋರಿಸುತ್ತದೆ.

ಹಲವಾರು ಎಎಪಿ-ಸಂಯೋಜಿತ ಖಾತೆಗಳು (ಇಲ್ಲಿ, ಇಲ್ಲಿ, ಮತ್ತು ಇಲ್ಲಿ ಆರ್ಕೈವ್ ಮಾಡಲಾಗಿದೆ) ಈ ರೀತಿಯ ಹಿಂದಿ ಶೀರ್ಷಿಕೆಗಳೊಂದಿಗೆ ಹಂಚಿಕೊಂಡಿವೆ: "ಎಬಿಪಿ ಸಮೀಕ್ಷೆಯು, ಎಎಪಿ- 58-60 ಸ್ಥಾನಗಳು, ಬಿಜೆಪಿ- 10-12 ಸ್ಥಾನಗಳು, ಕಾಂಗ್ರೆಸ್-0," ಮತ್ತು "ಸುಮಾರು 75% ಮಹಿಳೆಯರು ಕೇಜ್ರಿವಾಲ್‌ಗೆ ಮತ ಚಲಾಯಿಸುತ್ತಿದ್ದಾರೆ, ಮ್ಯಾಜಿಕ್ ಅಖಂಡವಾಗಿದೆ, ಕೇಜ್ರಿವಾಲ್ ಹಿಂದಿರುಗುತ್ತಿದ್ದಾರೆ." ಇದೇ ರೀತಿಯ ಪೋಷ್ಟ್ ಗಳ ಆರ್ಕೈವ್ ಮಾಡಲಾದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. 

                                                    (ಆನ್‌ಲೈನ್‌ನಲ್ಲಿ ಮಾಡಿದ ಹೇಳಿಕೆಗಳ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ))

 

ಆದರೆ, ವೀಡಿಯೋ ಫೇಕ್. ದೆಹಲಿ ಚುನಾವಣೆಯ ಬಗ್ಗೆ ಎಬಿಪಿ ನ್ಯೂಸ್ ಅಂತಹ ಯಾವುದೇ ಅಭಿಪ್ರಾಯ ಸಮೀಕ್ಷೆಯನ್ನು ನಡೆಸಿಲ್ಲ.

ವಾಸ್ತವವಾಗಿ

ಮೊದಲ ಕೆಲವು ಫ್ರೇಮ್‌ಗಳಲ್ಲಿ ಕೇಳಿದ ಮಹಿಳಾ ವಾಯ್ಸ್‌ಓವರ್ ವೀಡಿಯೋದಲ್ಲಿ ಕಂಡುಬರುವ ನಿರೂಪಕಿಯ ತುಟಿ ಚಲನೆಗಳೊಂದಿಗೆ ಸಿಂಕ್ ಆಗುವುದಿಲ್ಲ ಎಂದು ವೀಡಿಯೋದ ಸೂಕ್ಷ್ಮ ನೋಟವು ತೋರಿಸಿದೆ, ಇದು ಪ್ರತ್ಯೇಕ ಆಡಿಯೋವನ್ನು ಸೇರಿಸಲಾಗಿದೆ ಎಂದು ಸೂಚಿಸುತ್ತದೆ.

ಗೂಗಲ್‌ನಲ್ಲಿನ ಕೀವರ್ಡ್‌ಗಳ ಜೊತೆಗೆ ರಿವರ್ಸ್ ಇಮೇಜ್ ಸರ್ಚ್ ಜನವರಿ ೨೮, ೨೦೨೫ ರಂದು ಅಪ್‌ಲೋಡ್ ಮಾಡಲಾದ ಎಬಿಪಿ ನ್ಯೂಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿನ ಮೂಲ ವೀಡಿಯೋಗೆ (ಇಲ್ಲಿ ಆರ್ಕೈವ್ ಮಾಡಲಾಗಿದೆ) ನಮ್ಮನ್ನು ಕರೆದೊಯ್ಯಿತು. ಈ ವೀಡಿಯೋ ಅದೇ ನೀರೂಪಕಿಯನ್ನು ಒಳಗೊಂಡಿತ್ತು, ಇವರನ್ನು ನಾವು ಎಬಿಪಿ ನ್ಯೂಸ್' ಪೂಜಾ ಸಚ್‌ದೇವ ಎಂದು ಗುರುತಿಸಲು ಸಾಧ್ಯವಾಯಿತು (ಇಲ್ಲಿ ಆರ್ಕೈವ್ ಮಾಡಲಾಗಿದೆ). ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಅದೇ ರೀತಿಯ ಹಿನ್ನೆಲೆಯನ್ನು ಸಹ ನಾವು ನೋಡಬಹುದು.

ಮೂಲ ವೀಡಿಯೋದ ಮೊದಲ ಎರಡು ಸೆಕೆಂಡುಗಳು ಈಗ-ವೈರಲ್ ವೀಡಿಯೋದೊಂದಿಗೆ ಹೊಂದಾಣಿಕೆಯಾಗುತ್ತದೆ ಎಂದು ನಾವು ಗಮನಿಸಿದ್ದೇವೆ. ಆದರೇ, ಉಳಿದ ಬುಲೆಟಿನ್ ವರದಿಯನ್ನು ನ್ಯೂಸ್ ಚಾನೆಲ್‌ನ ಟೆಂಪ್ಲೇಟ್ ಬಳಸಿ ಫ್ಯಾಬ್ರಿಕೇಟೆಡ್ ನ್ಯೂಸ್ ಬುಲೆಟಿನ್ ಸೇರಿಸಲು ಎಡಿಟ್ ಮಾಡಲಾಗಿದೆ.

ದೆಹಲಿಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರದ ಭಾಗವಾಗಿ ಗಾಂಧಿಯವರ ರ್‍ಯಾಲಿಗಳ ಬಗ್ಗೆ ಸಚ್‌ದೇವ ಮಾತನಾಡುತ್ತಿರುವುದನ್ನು ಮೂಲ ವೀಡಿಯೋ ತೋರಿಸುತ್ತದೆ ಮತ್ತು ಎಎಪಿ ಗೆಲುವನ್ನು ಊಹಿಸುವ ಅಭಿಪ್ರಾಯ ಸಂಗ್ರಹವನ್ನು ಉಲ್ಲೇಖಿಸಿಲ್ಲ. ಈಗ ವೈರಲ್ ವೀಡಿಯೋದಲ್ಲಿ ಕೇಳಿದ ಮಹಿಳಾ ವಾಯ್ಸ್‌ಓವರ್‌ಗೆ ಸಚ್‌ದೇವ ಅವರ ಧ್ವನಿ ಹೊಂದಿಕೆಯಾಗುವುದಿಲ್ಲ ಎಂದು ನಾವು ಗಮನಿಸಿದ್ದೇವೆ.

Full View

ಎಬಿಪಿ ನ್ಯೂಸ್ 'ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ಇತ್ತೀಚಿನ ವೀಡಿಯೋಗಳನ್ನು ನಾವು ಪರಿಶೀಲಿಸಿದೆವು, ಇದು ದೆಹಲಿ ಚುನಾವಣೆಯ ಬಗ್ಗೆ ಸಚ್‌ದೇವ ನೀರುಪಾನ್ ಮಾಡಿರುವುದನ್ನು ತೋರಿಸುತ್ತದೆ, ಆದರೆ ಅಭಿಪ್ರಾಯ ಸಮೀಕ್ಷೆಯ ಬಗ್ಗೆ ಯಾವುದೇ ವರದಿ ಕಂಡುಬಂದಿಲ್ಲ.

ಇದಲ್ಲದೆ, ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ, ಎಬಿಪಿ ನ್ಯೂಸ್ ವೈರಲ್ ವೀಡಿಯೋ ಫೇಕ್ ಎಂದು ಕರೆದಿದೆ (ಇಲ್ಲಿ ಆರ್ಕೈವ್ ಮಾಡಲಾಗಿದೆ). ಚಾನಲ್‌ನ ಸ್ಪಷ್ಟೀಕರಣವು ವೈರಲ್ ಪೋಷ್ಟ್‌ಗಳಲ್ಲಿ ಒಂದಾದ ಸ್ಕ್ರೀನ್‌ಶಾಟ್ ಅನ್ನು ಒಳಗೊಂಡಿತ್ತು ಮತ್ತು ಹೀಗೆ ಹೇಳಿದೆ, “#Fakenewsalert | ಎಬಿಪಿ ನ್ಯೂಸ್ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಫೇಕ್ ವೀಡಿಯೋವನ್ನು ಪ್ರಸಾರ ಮಾಡಲಾಗುತ್ತಿದೆ. ಅಂತಹ ಯಾವುದೇ ಅಭಿಪ್ರಾಯ ಸಮೀಕ್ಷೆಯನ್ನು ಎಬಿಪಿ ನ್ಯೂಸ್ ನಡೆಸಲಾಗಿಲ್ಲ. ಫೇಕ್ ಸುದ್ದಿಗಳನ್ನು ತಪ್ಪಿಸಲು ಮತ್ತು ಸರಿಯಾದ ಸುದ್ದಿಗಳಿಗಾಗಿ ನಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಮಾತ್ರ ನಂಬಲು ನಿಮ್ಮನ್ನು ಕೋರಲಾಗಿದೆ (ಹಿಂದಿಯಿಂದ ಅನುವಾದಿಸಲಾಗಿದೆ).”

ತೀರ್ಪು

ಎಬಿಪಿ ನ್ಯೂಸ್ ಪ್ರಸಾರದ ಎಡಿಟ್ ಮಾಡಲಾದ ವೀಡಿಯೋವನ್ನು ನ್ಯೂಸ್ ಚಾನೆಲ್ ನಡೆಸಿದ ಅಭಿಪ್ರಾಯ ಸಮೀಕ್ಷೆಯು ೨೦೨೫ ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿಗೆ ವಿಜಯವನ್ನು ಊಹಿಸಿದೆ ಎಂದು ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ವೀಡಿಯೋ ಫೇಕ್ ಎಂದು ಎಬಿಪಿ ಸ್ಪಷ್ಟಪಡಿಸಿದೆ ಮತ್ತು ಚಾನೆಲ್ ಅಂತಹ ಯಾವುದೇ ಅಭಿಪ್ರಾಯ ಸಂಗ್ರಹವನ್ನು ನಡೆಸಿಲ್ಲ.

 ಈ ಲೇಖನವನ್ನು ಮೊದಲು logicallyfacts.com ಪ್ರಕಟಿಸಿದೆ. ʼಶಕ್ತಿ ಕಲೆಕ್ಟಿವ್‌ʼನ ಭಾಗವಾಗಿ ವಾರ್ತಾ ಭಾರತಿ ಪ್ರಕಟಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News