×
Ad

ವೈದ್ಯೆ ಹತ್ಯೆಗೆ ಮುನ್ನ ವೇಶ್ಯಾಗೃಹಕ್ಕೆ ತೆರಳಿದ್ದ ಆರೋಪಿ: ಕೊಲ್ಕತ್ತಾ ಪೊಲೀಸರಿಂದ ಬಹಿರಂಗ

Update: 2024-08-21 07:40 IST

ಕೊಲ್ಕತ್ತಾ: ಆರ್ ಜಿ ಕರ್ ಆಸ್ಪತ್ರೆಯ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಆರೋಪಿ ಸಂಜಯ್ ರಾಯ್ ಕೃತ್ಯ ಎಸಗಿದ ರಾತ್ರಿ ಎರಡು ವೇಶ್ಯಾಗೃಹಗಳಿಗೆ ಭೇಟಿ ನೀಡಿದ್ದ ಎಂದು ಕೊಲ್ಕತ್ತಾ ಪೊಲೀಸರು ಬಹಿರಂಗಪಡಿಸಿದ್ದಾರೆ.

ಆರೋಪಿ ಹಾಗೂ ಆಸ್ಪತ್ರೆಯ ನಾಗರಿಕ ಸ್ವಯಂ ಸೇವಕನಾಗಿದ್ದ ರಾಯ್ ಆಗಸ್ಟ್ 8ರಂದು ರಾತ್ರಿ ಸೋನಾಗಚಿ ರೆಡ್ಲೈಟ್ ಪ್ರದೇಶಕ್ಕೆ ತೆರಳಿದ್ದ. ಮದ್ಯಪಾನ ಮಾಡಿ ಎರಡು ವೇಶ್ಯಾಗೃಹಗಳಿಗೆ ತೆರಳಿದ್ದ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಎನ್ ಡಿ ಟಿವಿ ವರದಿ ಮಾಡಿದೆ.

ಹತ್ಯೆ ನಡೆದ ರಾತ್ರಿ ಕಿರಿಯ ವೈದ್ಯೆ ನಿದ್ದೆ ಮಾಡುತ್ತಿದ್ದ ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್ ಗೆ ಆತ ಭೇಟಿ ನೀಡಿ ಅಲ್ಲಿಂದ ನಿರ್ಗಮಿಸಿದ್ದು, ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿದ್ದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿತ್ತು.

ಈ ಸರ್ಕಾರಿ ಸ್ವಾಮ್ಯದ ಆಸ್ಪತ್ರೆಯಲ್ಲಿ ನಡೆದ ಕೃತ್ಯದ ಬಗೆಗಿನ ವಿಚಾರಣೆ ವೇಳೆ ಭಾರತದ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು, "ತಳಹಂತದಲ್ಲಿ ಬದಲಾವಣೆಗಳು ಆಗಲು ದೇಶ ಇನ್ನೊಂದು ಅತ್ಯಾಚಾರ ಪ್ರಕರಣಕ್ಕೆ ಕಾಯಲಾಗದು" ಎಂದು ಅಭಿಪ್ರಾಯಪಟ್ಟಿದ್ದರು.

ಹಾಲಿ ಇರುವ ಕಾನೂನುಗಳು ವೈದ್ಯರಿಗೆ ಮತ್ತು ವೈದ್ಯಕೀಯ ಸಿಬ್ಬಂದಿಗೆ ಅಗತ್ಯವಾದ ಸಾಂಸ್ಥಿಕ ಸುರಕ್ಷಾ ಮಾನದಂಡಗಳಿಗೆ ಅನುಸಾರವಾಗಿಲ್ಲ. ಪುರುಷ ಪ್ರಧಾನ ಪಕ್ಷಪಾತದಿಂದ ಮಹಿಳಾ ವೈದ್ಯೆಯರನ್ನು ಗುರಿ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News