×
Ad

ಅನಂತ್ ಅಂಬಾನಿ ಮದುವೆ: ಅತಿಥಿಗಳಿಗೆ 1.5 ಕೋಟಿ ರೂ. ಮೌಲ್ಯದ ವಾಚ್ ಉಡುಗೊರೆ; ವರದಿ

Update: 2024-07-14 13:01 IST

Screengrab:Instagram/theindianhorology

ಮುಂಬೈ: ಜುಲೈ 12ರಂದು ನಡೆದ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ವಿವಾಹದಲ್ಲಿ ಪಾಲ್ಗೊಂಡಿದ್ದ ಆಯ್ದ ಅತಿ ಗಣ್ಯ ಅತಿಥಿಗಳಿಗೆ ಅನಂತ್ ಅಂಬಾನಿ ವೈಯಕ್ತಿಕ ವಿನ್ಯಾಸ ಹೊಂದಿರುವ ತಲಾ ರೂ. 1.5 ಕೋಟಿ ಮೌಲ್ಯದ ಅಡೆಮರ್ಸ್ ಪಿಗ್ಯೂಟ್ ಕೈಗಡಿಯಾರಗಳ ಉಡುಗೊರೆ ನೀಡಿದ್ದಾರೆ ಎಂದು ವರದಿಯಾಗಿದೆ.

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹದಲ್ಲಿ ಪಾಲ್ಗೊಂಡಿದ್ದ ಅತಿ ಗಣ್ಯ ಅತಿಥಿಗಳಿಗೆ ಅನಂತ್ ಅಂಬಾನಿ ಸೀಮಿತ ಆವೃತ್ತಿಯ ಆಡೆಮರ್ಸ್ ಪಿಗ್ಯೂಟ್ ಕೈಗಡಿಯಾರಗಳನ್ನು ಉಡುಗೊರೆ ನೀಡಿದ್ದಾರೆ ಎಂದು indiatoday.in ವರದಿ ಮಾಡಿದೆ.

ಅನಂತ್ ಅಂಬಾನಿ ಉಡುಗೊರೆ ನೀಡಿದ ಈ ಕೈಗಡಿಯಾರದ ಕವಚವು 41 ಮಿಮೀ ವ್ಯಾಸ ಹೊಂದಿದ್ದು, ಅದನ್ನು 18 ಕ್ಯಾರೆ‌ಟ್‌ನ ಗುಲಾಬಿ ಚಿನ್ನದಿಂದ ತಯಾರಿಸಲಾಗಿದೆ. 9.5 ಮಿಮೀ ದಪ್ಪವಿದ್ದು, ಕಪ್ಪು ಲೋಹದ ಹಿಂಬದಿ ಹೊಂದಿದೆ ಎಂದು ಹೇಳಲಾಗಿದೆ.

ಈ ಕೈಗಡಿಯಾರಗಳ ಉಡುಗೊರೆಯನ್ನು ಬಾಲಿವುಡ್ ನಟರಾದ ಶಾರೂಖ್ ಖಾನ್, ರಣವೀರ್ ಸಿಂಗ್, ಶಿಖರ್ ಪಹಾರಿಯಾ ಹಾಗೂ ವೀರ್ ಪಹಾರಿಯಾ ಸೇರಿದಂತೆ ಹಲವರು ಸ್ವೀಕರಿಸಿರುವುದು ವೈರಲ್ ವಿಡಿಯೊದಲ್ಲಿ ಕಂಡು ಬಂದಿದೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News