×
Ad

ಅಂಡಮಾನ್ | 11ನೇ ತರಗತಿಗೆ ಪ್ರವೇಶ ಪಡೆದ ಪ್ರಾಚೀನ ʼಒಂಗೆ’ ಬುಡಕಟ್ಟಿನ 9 ಮಕ್ಕಳು

Update: 2025-07-20 21:13 IST

ಸಾಂದರ್ಭಿಕ ಚಿತ್ರ |  andamansheekha

ಹೊಸದಿಲ್ಲಿ : ಭಾರತದ ಪ್ರಾಚೀನ ಬುಡಕಟ್ಟು ಸಮುದಾಯಗಳಲ್ಲಿ ಒಂದಾಗಿರುವ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ‘ಒಂಗೆ’ ಬುಡಕಟ್ಟಿನ 9 ಮಂದಿ ಮಕ್ಕಳು ಇದೇ ಮೊದಲ ಬಾರಿಗೆ ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 11ನೇ ತರಗತಿಗೆ ಪ್ರವೇಶ ಪಡೆದಿದ್ದಾರೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಐವರು ಬಾಲಕಿರು ಮತ್ತು ನಾಲ್ವರು ಬಾಲಕರು ಸೇರಿದಂತೆ ‘ಒಂಗೆ’ ಬುಡಕಟ್ಟಿನ 9 ವಿದ್ಯಾರ್ಥಿಗಳು ಲಿಟಲ್ ಅಂಡಮಾನ್‌ನ ಡುಗಾಂಗ್ ಕ್ರೀಕ್‌ನಲ್ಲಿರುವ ಆರ್.ಕೆ. ಪುರದ ಪಿಎಂ ಶ್ರೀ ಸರಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ 11ನೇ ತರಗತಿ ಕಲಾ ವಿಭಾಗಕ್ಕೆ ಪ್ರವೇಶ ಪಡೆದಿದ್ದಾರೆ.

ಇತ್ತೀಚೆಗೆ ನಡೆದ ಸಿಬಿಎಸ್ಇ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ʼಒಂಗೆ’ ಬುಡಕಟ್ಟಿನ 9 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಘೋಷಿಸಲು ನಮಗೆ ಸಂತೋಷವಾಗಿದೆ. ʼಒಂಗೆ’ ಬುಡಕಟ್ಟಿನ 9 ವಿದ್ಯಾರ್ಥಿಗಳು ಈ ಶೈಕ್ಷಣಿಕ ಮೈಲಿಗಲ್ಲು ತಲುಪಿರುವುದು ಇದೇ ಮೊದಲು. ಅವರಿಗೆ 11ನೇ ತರಗತಿಗೆ ಪ್ರವೇಶಾತಿ ನೀಡಲಾಗಿದೆ. ಅವರ ತರಗತಿಗಳು ಜುಲೈ 15ರಿಂದ ಪ್ರಾರಂಭವಾಗಿದೆ ಎಂದು ಡುಗಾಂಗ್ ಕ್ರೀಕ್‌ನ ಶಾಲಾ ಶಿಕ್ಷಕ ಪ್ರಕಾಶ್ ಟಿರ್ಕಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News