×
Ad

ಅಂಗಡಿಯಿಂದ 20 ಕಿಲೋ ಟೊಮೆಟೊ ಕಳವು

Update: 2023-07-06 22:08 IST

ಸಾಂದರ್ಭಿಕ ಚಿತ್ರ \ Photo: PTI 

ಡೋರ್ನಕಲ್ (ಆಂಧ್ರಪ್ರದೇಶ), ಜು. 6: ಟೊಮೆಟೊ ದರ ಗಗನಕ್ಕೆ ಏರುತ್ತಿರುವಂತೆಯೇ, ಕಳ್ಳರು ಆಂಧ್ರಪ್ರದೇಶದ ಡೋರ್ನಕಲ್ನ ಅಂಗಡಿಯೊಂದರಿಂದ 20 ಕಿಲೋ ಟೊಮೆಟೊ, ಒಂದು ಡಬ್ಬ ಕರಿಮೆಣಸು ಮತ್ತು ಇತರ ಮೂರು ತರಕಾರಿ ಡಬ್ಬಗಳನ್ನು ಕದ್ದಿದ್ದಾರೆ.

‘‘ನಾನು ಬುಧವಾರ ಸಂಜೆ ಅಂಗಡಿಯನ್ನು ಮುಚ್ಚಿದ ಬಳಿಕ, ದುಷ್ಕರ್ಮಿಗಳು ತಡರಾತ್ರಿ ಸುಮಾರು 20 ಕಿಲೋ ತೂಕದ ಮೂರು ಟೊಮೆಟೊ ಡಬ್ಬಗಳು ಮತ್ತು ಕರಿಮೆಣಸಿನ ಡಬ್ಬಗಳನ್ನು ಕದ್ದಿದ್ದಾರೆ. ಅವರು ಎಲ್ಲಾ ದುಬಾರಿ ತರಕಾರಿಗಳನ್ನು ಕದ್ದಿದ್ದಾರೆ’’ ಎಂದು ಅಂಗಡಿ ಮಾಲಕ ಲಾಕ್ಪತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಕಳ್ಳರ ಕೃತ್ಯಗಳು ಸಿಸಿಟಿವಿ ಕ್ಯಾಮರದಲ್ಲಿ ದಾಖಲಾಗಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News