×
Ad

ಟೊಮೆಟೊ ಮಾರಾಟ ಮಾಡಿ 45 ದಿನಗಳಲ್ಲಿ 4 ಕೋಟಿ ರೂ.ಗಳಿಸಿದ ಆಂಧ್ರದ ರೈತ!

Update: 2023-07-30 15:40 IST

ಅಮರಾವತಿ: ಟೊಮೆಟೊಗಳ ಬೆಲೆ ಗಗನಕ್ಕೇರುತ್ತಿರುವ ಮಧ್ಯೆ, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ರೈತ ದಂಪತಿ  40,000 ಪೆಟ್ಟಿಗೆಗಳ ಟೊಮೆಟೊಗಳನ್ನು ಮಾರಾಟ ಮಾಡಿ 45 ದಿನಗಳ ಅವಧಿಯಲ್ಲಿ 4 ಕೋಟಿ ರೂ. ಗಳಿಸಿದ್ದಾರೆ.

ಟೊಮೆಟೊ ರೈತ ಚಂದ್ರಮೌಳಿ, 22 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದು, ಎಪ್ರಿಲ್ ಮೊದಲ ವಾರದಲ್ಲಿ ಅಪರೂಪದ ವೈವಿಧ್ಯಮಯ ಟೊಮೆಟೊ ಬಿತ್ತನೆ ಮಾಡಿದರು. ಇಳುವರಿಯನ್ನು ವೇಗವಾಗಿ ಪಡೆಯಲು ಅವರು ಹಸಿಗೊಬ್ಬರ ಹಾಗೂ ಸೂಕ್ಷ್ಮ ನೀರಾವರಿಯಂತಹ ಸುಧಾರಿತ ತಂತ್ರಗಳನ್ನು ಜಾರಿಗೆ ತಂದರು. ಜೂನ್ ಅಂತ್ಯದ ವೇಳೆಗೆ ಟೊಮೆಟೊ ಇಳುವರಿಯನ್ನು ಪಡೆದಾಗ ಅವರು ತಮ್ಮ ಪ್ರಯತ್ನಗಳಲ್ಲಿ ಯಶಸ್ವಿಯಾದರು.

ಅವರು ತಮ್ಮ ಉತ್ಪನ್ನಗಳನ್ನು ಕರ್ನಾಟಕದ ಕೋಲಾರ ಮಾರುಕಟ್ಟೆಯಲ್ಲಿ ಮಾರಿದ್ದರು, ಅದು ಅವರ ಊರಿಗೆ ಹತ್ತಿರದಲ್ಲಿದೆ. ಮಾರುಕಟ್ಟೆಯಲ್ಲಿ, ಕಳೆದ 45 ದಿನಗಳಲ್ಲಿ 40,000 ಪೆಟ್ಟಿಗೆಗಳ  ಟೊಮೆಟೊ ಮಾರಾಟ ಮಾಡಿದರು.

ಟೊಮೆಟೊ ಬೆಲೆ ಏರಿಕೆಯಾಗುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಚಂದ್ರಮೌಳಿ, "ಟೊಮೆಟೊ ಮಾರಾಟದಿಂದ ನಾನು ಈ ತನಕ 4 ಕೋಟಿ ರೂ.ಗಳಿಸಿದ್ದೇನೆ. 22 ಎಕರೆ ಭೂಮಿಯಲ್ಲಿ ಬೆಳೆ ತೆಗೆಯಲು ಒಟ್ಟು 1 ಕೋ.ರೂ. ಖರ್ಚು ಮಾಡಿದ್ದೇನೆ. ಇದರಲ್ಲಿ ಕಮಿಶನ್ ಹಾಗೂ ಸಾರಿಗೆ ವೆಚ್ಚವೂ ಸೇರಿದೆ. ಹೀಗಾಗಿ ನನಗೆ 3 ಕೋ.ರೂ. ಲಾಭವಾಗಿದೆ''ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News