×
Ad

ಕಾಪಿರೈಟ್ ಹೆಸರಲ್ಲಿ ಸುಲಿಗೆ ಆರೋಪಿಸಿದ ಯೂಟ್ಯೂಬರ್ ಮೋಹಕ್ ಮಂಗಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಎಎನ್ಐ

Update: 2025-05-28 22:00 IST

ಹೊಸದಿಲ್ಲಿ : ಯೂಟ್ಯೂಬರ್ ಮೋಹಕ್ ಮಂಗಲ್ ಇತ್ತೀಚಿನ ವೀಡಿಯೊದಲ್ಲಿ ಸಂಸ್ಥೆಯ ವಿರುದ್ಧ ಮಾಡಿರುವ ಆರೋಪ ಸುಳ್ಳು ಎಂದು ಎಎನ್ಐ ಸುದ್ದಿ ಸಂಸ್ಥೆ ದಿಲ್ಲಿ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆಯನ್ನು ಹೂಡಿದೆ.

ಎಎನ್ಐ ಸುದ್ದಿ ಸಂಸ್ಥೆ ವಕೀಲ ಅಕ್ಷಿತ್ ಮಾಗೊ ಅವರ ಮೂಲಕ ಮಾನನಷ್ಟ ಮೊಕದ್ದಮೆಯನ್ನು ಸಲ್ಲಿಸಿದೆ. ಈ ಕುರಿತು ಮೇ.29ರಂದು ಅರ್ಜಿ ವಿಚಾರಣೆ ನಡೆಯಲಿದೆ.

ಈ ವೀಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಕ್ಕಾಗಿ ಹಾಸ್ಯನಟ ಕುನಾಲ್ ಕಮ್ರಾ ಮತ್ತು ಆಲ್ಟ್‌ನ್ಯೂಸ್‌ ಸಹ-ಸಂಸ್ಥಾಪಕ ಮುಹಮ್ಮದ್ ಝುಬೇರ್ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ಜನಪ್ರಿಯ ಯೂಟ್ಯೂಬರ್ ಮತ್ತು ಎಜುಕೇಟರ್ ಮೋಹಕ್ ಮಂಗಲ್ ಅವರು ಏಷ್ಯನ್ ನ್ಯೂಸ್ ಇಂಟರ್‌ನ್ಯಾಷನಲ್‌(ANI) ಕಾಪಿರೈಟ್ ಸೋಗಿನಲ್ಲಿ ವ್ಯವಸ್ಥಿತ ಸುಲಿಗೆಯಲ್ಲಿ ತೊಡಗಿಕೊಂಡಿದೆ ಎಂದು ಮೇ 25ರಂದು ಆರೋಪಿಸಿದ್ದರು.

ಈ ಕುರಿತು ಮಂಗಲ್ ಮಾಡಿರುವ ʼಡಿಯರ್ ANIʼ ಎಂಬ ಶೀರ್ಷಿಕೆಯ ವೀಡಿಯೊದಲ್ಲಿ ANI ತನ್ನ ಯೂಟ್ಯೂಬ್ ಚಾನೆಲ್ ಮೇಲೆ ಹಲವಾರು ಕಾಪಿರೈಟ್ ಸ್ಟ್ರೈಕ್‌ಗಳನ್ನು ನೀಡಿದ್ದು, ನಂತರ ಸ್ಟ್ರೈಕ್‌ಗಳನ್ನು ರದ್ದುಗೊಳಿಸಲು ಮತ್ತು ಚಾನೆಲನ್ನು ಡಿಲೀಟ್ ಮಾಡುವುದರಿಂದ ತಪ್ಪಿಸಲು 45-50 ಲಕ್ಷ ರೂ. ಪಾವತಿ ಮಾಡುವಂತೆ ಕೇಳಿತು ಎಂದು ಆರೋಪಿಸಿದ್ದರು.

ಅನೇಕ ಕಂಟೆಂಟ್ ಕ್ರಿಯೇಟರ್‌ಗಳು ANIಯ ಕ್ರಮವನ್ನು ವಿರೋಧಿಸಿದ್ದರು. ANI ಸುಲಿಗೆ ಮಾಡುತ್ತಿದೆ ಎಂದು ಆರೋಪಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News